News

ನಿಧನ ವಾರ್ತೆ: ವಿ.ಎಸ್.ವಿ ಗುಪ್ತ

Sidlaghatta Tilak Stores VSV Gupta

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅತ್ಯಂತ ಹಳೆಯ ಔಷಧಿ ಅಂಗಡಿಗಳಲ್ಲಿ ಒಂದಾದ ತಿಲಕ್ ಸ್ಟೋರ್ಸ್ ನ ಮಾಲೀಕ ವಿ.ಎಸ್.ವಿ ಗುಪ್ತ (89) ಅವರು ವಯೋಸಹಜ ಕಾರಣಗಳಿಂದ ಬುಧವಾರ ಬೆಳಗ್ಗೆ ನಿಧನರಾದರು.

ಎಪ್ಪತ್ತರ ದಶಕದಲ್ಲಿ ಶಿಡ್ಲಘಟ್ಟದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರಾಗಿ ಹಲವಾರು ಸೇವಾ ಕಾರ್ಯಗಳನ್ನು ನಡೆಸಿದ್ದರು. ಕಳೆದ 35 ವರ್ಷಗಳಿಂದ ತಾಲ್ಲೂಕು ಔಷಧಿ ಅಂಗಡಿಗಳ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಇತ್ತೀಚೆಗೆ ಗೌರವಾಧ್ಯಕ್ಷರಾಗಿದ್ದರು. 2012 ರಲ್ಲಿ ಥಾಯ್ಲೆಂಡ್ ದೇಶದಲ್ಲಿ ಔಷಧಿ ಸಂಘದಿಂದ ಅವರನ್ನು ಸನ್ಮಾನಿಸಲಾಗಿತ್ತು. ಪತ್ನಿ, ಇಬ್ಬರು ಗಂಡು ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ತಾಲ್ಲೂಕು ಔಷಧಿ ಸಂಘ, ವಾಸವಿ ಸಂಘ ಹಾಗೂ ಇತರ ಸಂಘ ಸಂಸ್ಥೆಗಳ ಸದಸ್ಯರು ಮೃತರ ಅಂತಿಮ ದರ್ಶನ ಪಡೆದು ಭಾವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. ಮೃತರ ಅಂತ್ಯಸಂಸ್ಕಾರವನ್ನು ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Share
error: Content is protected !!