ಚೌಡೇಶ್ವರಿ ದೇವಿ ಪ್ರತಿಮೆ ಮೆರವಣಿಗೆ: ಉತ್ತಮ ಮಳೆ-ಬೆಳೆಗಾಗಿ ಯುವಕರಿಂದ ಧಾರ್ಮಿಕ ಕಾರ್ಯಕ್ರಮ

Chowdeshwari Devi idol procession by village youth, Malluru, Sidlaghatta

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಅ. 31ರಂದು ಗ್ರಾಮಸ್ಥರ ಸುಖ, ಶಾಂತಿ, ನೆಮ್ಮದಿ ಹಾಗೂ ಉತ್ತಮ ಮಳೆ-ಬೆಳೆಗಾಗಿ ಧಾರ್ಮಿಕ ಸಂಘದ ಯುವಕರ ಬಳಗದ ವತಿಯಿಂದ ಶ್ರೀ ಚೌಡೇಶ್ವರಿ ದೇವಿಯ ಪ್ರತಿಮೆಯ ಮೆರವಣಿಗೆಯನ್ನು ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಯಿತು.

ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿಯೂ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಚೌಡೇಶ್ವರಿ ದೇವಿಯ ಪ್ರತಿಮೆಗೆ ವಿಶೇಷ ಅಭಿಷೇಕ ಹಾಗೂ ಪೂಜೆಗಳನ್ನು ಸಲ್ಲಿಸಲಾಯಿತು. ನಂತರ ತಮಟೆ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಮೆರವಣಿಗೆ ಸಾಗಿತು. ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕೂ ಗ್ರಾಮಸ್ಥರು ಮನೆಗಳ ಮುಂದೆ ನಿಂತು ದೇವಿಗೆ ಮಂಗಳಾರತಿ ಎತ್ತಿ, ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

Decorated Chowdeshwari Devi idol in procession, Malluru, Sidlaghatta

ಗ್ರಾಮದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲಿ, ಯಾವುದೇ ಅನಿಷ್ಟಗಳು ಎದುರಾಗದಿರಲಿ ಹಾಗೂ ಕಾಲಕಾಲಕ್ಕೆ ಸಮೃದ್ಧ ಮಳೆಯಾಗಿ ರೈತರ ಬೆಳೆಗಳು ಉತ್ತಮವಾಗಿ ಬರಲಿ ಎಂಬ ಸಂಕಲ್ಪದೊಂದಿಗೆ ಯುವಕರು ಈ ಧಾರ್ಮಿಕ ಕೈಂಕರ್ಯವನ್ನು ಮುನ್ನಡೆಸಿದರು.

ಪೂಜಾ ಕಾರ್ಯಕ್ರಮಗಳ ಅಂಗವಾಗಿ ಭಕ್ತಾದಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮದ ಯುವಕರು ಒಗ್ಗಟ್ಟಾಗಿ ನಿಂತು ಕಾರ್ಯಕ್ರಮದ ವ್ಯವಸ್ಥೆಗಳನ್ನು ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಮಂಜುನಾಥ್, ಉದಯ್, ನವೀನ್, ಜಿತಿನ್, ಬಾಲಾಜಿ, ರೋಹಿತ್, ಮಧು, ಮನೋಹರ್, ನಾಗರಾಜ್, ಮುರಳಿ ಸೇರಿದಂತೆ ಧಾರ್ಮಿಕ ಸಂಘದ ಯುವಕರು ಹಾಗೂ ಅಪಾರ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸಂಬಂಧಿತ ಸುದ್ದಿ: ಶ್ರೀ ಚೌಡೇಶ್ವರಿ ದೇವಿಯ ಆಲಯದ ಲೋಕಾರ್ಪಣೆ; ಮನೆಮನೆಗೆ ಶ್ರೀಗಂಧದ ಸಸಿ ವಿತರಣೆ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

More

Share
error: Content is protected !!