News

ಚೀಮಂಗಲ ಸರ್ಕಾರಿ ಶಾಲೆಗೆ ‘ಅತ್ಯುತ್ತಮ SDMC’ ಪ್ರಶಸ್ತಿಯ ಗರಿ

Cheemangala Government School Best SDMC Award

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಚೀಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಇತಿಹಾಸ ಬರೆದಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಪರಿಣಾಮಕಾರಿ ಚಟುವಟಿಕೆಗಳನ್ನು ಗುರುತಿಸಿ ಶಿಕ್ಷಣ ಇಲಾಖೆ ನೀಡುವ ‘ಅತ್ಯುತ್ತಮ ಎಸ್‌ಡಿಎಂಸಿ ಪುರಸ್ಕಾರ’ ಈ ಬಾರಿ ಚೀಮಂಗಲ ಶಾಲೆಗೆ ಒಲಿದಿದೆ.

ಖಾಸಗಿ ಶಾಲೆಗಳಿಗೂ ಸವಾಲು ನೀಡುವ ಸೌಲಭ್ಯ:

ಚೀಮಂಗಲ ಶಾಲೆಯು ಕೇವಲ ಹೆಸರಿಗಷ್ಟೇ ಸರ್ಕಾರಿ ಶಾಲೆಯಾಗಿ ಉಳಿದಿಲ್ಲ. ಎಸ್‌ಡಿಎಂಸಿ ಸಮಿತಿ ಮತ್ತು ಶಿಕ್ಷಕರ ಶ್ರಮದಿಂದ ಇಲ್ಲಿ ಖಾಸಗಿ ಶಾಲೆಗಳನ್ನೂ ಮೀರಿಸುವಂತಹ ಸೌಲಭ್ಯಗಳಿವೆ:

ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್ ಹಾಗೂ ಡಿಜಿಟಲ್ ಕ್ಲಾಸ್‌ ರೂಮ್‌ಗಳು.

  • ವಿದ್ಯಾರ್ಥಿಗಳಿಗೆ ಕರಾಟೆ ಮತ್ತು ಯೋಗ ತರಬೇತಿ.
  • ಸ್ಮಾರ್ಟ್ ಕ್ಲಾಸ್ ಹಾಗೂ ವಿಜ್ಞಾನ ಕಲಿಕೆಗೆ ‘ಸೈನ್ಸ್ ಗೇಮ್ಸ್’ ಸೌಲಭ್ಯ.
  • ಆಕರ್ಷಕ ಶಾಲಾ ವಾತಾವರಣ ಮತ್ತು ಗುಣಮಟ್ಟದ ಶಿಕ್ಷಣ.

ಪಿಎಂಶ್ರೀ ಯೋಜನೆಗೆ ಆಯ್ಕೆ:

ಸಿಆರ್‌ಪಿ ಹೇಮಲತಾ ಮಾತನಾಡಿ, “ಈ ಶಾಲೆಯು ಈಗಾಗಲೇ ದಶಮಾನೋತ್ಸವ ಆಚರಿಸಿಕೊಂಡಿದೆ ಮತ್ತು ಕೇಂದ್ರದ ‘ಪಿಎಂಶ್ರೀ’ (PM-SHRI) ಯೋಜನೆಗೂ ಆಯ್ಕೆಯಾಗಿದೆ. ಹಳೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಹಕಾರವೇ ಈ ಯಶಸ್ಸಿಗೆ ಕಾರಣ,” ಎಂದು ಹೆಮ್ಮೆಯಿಂದ ತಿಳಿಸಿದರು.

ಬಸ್ ವ್ಯವಸ್ಥೆಗೆ ಅಳಲು:

ಇಷ್ಟೆಲ್ಲಾ ಸಾಧನೆಗಳ ನಡುವೆ ಒಂದು ದೊಡ್ಡ ಸಮಸ್ಯೆ ಶಾಲೆಯನ್ನು ಕಾಡುತ್ತಿದೆ. ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಮಾತನಾಡಿ, “ನಮ್ಮ ಶಾಲೆಯಲ್ಲಿ ಸೌಲಭ್ಯಗಳೇನೋ ಇವೆ, ಆದರೆ ಮಕ್ಕಳು ಶಾಲೆಗೆ ಬರಲು ಬಸ್ಸಿನ ಸೌಕರ್ಯವಿಲ್ಲ. ಇದರಿಂದ ಹಾಜರಾತಿ ಕುಂಠಿತವಾಗುತ್ತಿದೆ. ಶಾಸಕರು ಮತ್ತು ಇಲಾಖೆ ಕೂಡಲೇ ಶಿಡ್ಲಘಟ್ಟ – ಚೀಮಂಗಲ ಮಾರ್ಗವಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು,” ಎಂದು ಮನವಿ ಮಾಡಿದರು.


For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Share
error: Content is protected !!