Home News “ವರ್ತುಲ” ಕಾದಂಬರಿ ಬಿಡುಗಡೆ

“ವರ್ತುಲ” ಕಾದಂಬರಿ ಬಿಡುಗಡೆ

0
Vartula Kannada Literature Novel Release Sidlaghatta

ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ತುಲನ ಪ್ರಕಾಶನ ಮತ್ತು ಚುಟುಕು ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ನಾಗವೇಣಿ ಹೊಸಕೋಟೆ ಬರೆದಿರುವ “ವರ್ತುಲ” ಕಾದಂಬರಿಯನ್ನು ಲೋಕಾರ್ಪಣೆ ಮಾಡಿ ಕೆ.ಎಂ.ಎಫ್ ನಿರ್ದೇಶಕ ಆರ್. ಶ್ರೀನಿವಾಸ್ ಮಾತನಾಡಿದರು.  

ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಕವಿ, ಸಾಹಿತಿಗಳು ಬರೆದಿರುವ ಒಳ್ಳೆಯ ಪುಸ್ತಕಗಳನ್ನು ನೀಡಿ ಓದುವ ಹವ್ಯಾಸವನ್ನು ಬೆಳಸಬೇಕು ಎಂದು ಅವರು ತಿಳಿಸಿದರು. 

 ಇಂದು  ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ. ಮೊಬೈಲ್ ಗಳಿಗೆ ಎಲ್ಲರೂ ಮಾರು ಹೋಗಿದ್ದೇವೆ. ಕೈಯಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡು ಎಲ್ಲವನ್ನು ಅದರಲ್ಲಿಯೇ ನೋಡಿ ತಿಳಿಯುವ ಭ್ರಮೆಯಲ್ಲಿ ಪುಸ್ತಕದ ರೂಪದಲ್ಲಿ ಸಾಹಿತ್ಯವನ್ನು ಓದುವ ಆನಂದವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರು.

 ಮನೆಗಳಲ್ಲಿ ತಂದೆತಾಯಿ ಮಕ್ಕಳಿಗೆ ಕನ್ನಡ ಪುಸ್ತಕ ಹಾಗೂ ಪತ್ರಿಕೆಗಳನ್ನು ಓದುವ ಹಾಗೂ ಸ್ವತಂತ್ರವಾಗಿ ಅಭಿಪ್ರಾಯವನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸಲು ಪ್ರೋತ್ಸಾಹಿಸಬೇಕು. ಆಗ ಮಾತ್ರ ಕನ್ನಡ ಭಾಷೆಯನ್ನು ಗಡಿನಾಡಿನ ಈ ಭಾಗಗಳಲ್ಲಿ ಉಳಿಸಿ, ಬೆಳೆಸಬಹುದು. ನಮ್ಮ ಗಡಿನಾಡಿನಲ್ಲಿ ಉತ್ತಮ ಸಾಹಿತಿಗಳು, ಕವಿಗಳು, ಕಾದಂಬರಿಕಾರರು ಹೆಚ್ಚಾಗಬೇಕು. ಅವರಿಗೆ ಪ್ರೋತ್ಸಾಹ ನೀಡುವ ವಾತಾವರಣವನ್ನು ಸೃಷ್ಟಿಸಬೇಕು ಎಂದರು.

 ಸಹೋದರಿ ನಾಗವೇಣಿ ಇನ್ನೂ ಹೆಚ್ಚು ಪುಸ್ತಕಗಳನ್ನು ಬರೆದು ಪ್ರಕಟಿಸಲಿ. ಅವರ ಪ್ರೇರಣೆ ಪಡೆದು ಇತರೆ ಹೆಣ್ಣು ಮಕ್ಕಳು ಸಾಹಿತ್ಯಾಸಕ್ತಿ ಹೊಂದಲಿ ಎಂದು ಅಭಿಪ್ರಾಯಪಟ್ಟರು.

 ಮಹಿಳೆಯರಿಗೆ ಶೇಕಡಾ 50 ಮೀಸಲಾತಿ ಇದೆ. ಆದರೆ ಕೆಲ ಕ್ಷೇತ್ರಗಳಲ್ಲಿ ಮಾತ್ರ ಮಹಿಳೆಯರು ತಮ್ಮ ವ್ಯಾಪ್ತಿಯಲ್ಲಿರುವ ಕೆಲಸವನ್ನು ನಾಜೂಕಾಗಿ ಮಾಡುತ್ತಾರೆ. ಮಿಕ್ಕ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರ ಗಳಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರನ್ನು ಕಾಣಬಹುದು ಎಂದರು.

ಕಾರ್ಯಕ್ರಮದಲ್ಲಿ ಕಾದಂಬರಿಗಾರ್ತಿ ನಾಗವೇಣಿ ಹೊಸಕೋಟೆ ಅವರು ತಮ್ಮ ಅತ್ತೆ ನಾರಾಯಣಮ್ಮ, ತಾಯಿ ಲಕ್ಷ್ಮಮ್ಮ ಹಾಗೂ ಗುರುಗಳಾದ ಹೇಮಾವತಿ ಅವರನ್ನು ಸನ್ಮಾನಿಸಿದರು.

  ತುಲನ ಪ್ರಕಾಶನ ಬಸವನಗುಡಿಯ ಅಚ್ಯುತ ಸಂಕೇತಿ,  ಕಾದಂಬರಿಗಾರ್ತಿ ನಾಗವೇಣಿ ಹೊಸಕೋಟೆ, ಮಂಜುನಾಥ್, ಕಾಗತಿ  ವಿ. ವೆಂಕಟರತ್ನಂ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಪಾತಮುತ್ತಕಪಲ್ಲಿ ಎಂ. ಚಲಪತಿ ಗೌಡ, ಕ.ಸಾ.ಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜ್ ರಾವ್, ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತ ಕೃಷ್ಣ, ಚುಟುಕು ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಈಧರೆ ಪ್ರಕಾಶ್, ವಸಾಪ ತಾಲ್ಲೂಕು ಅಧ್ಯಕ್ಷ ನಾರಾಯಣ ಸ್ವಾಮಿ, ಟಿ.ಟಿ.ನರಸಿಂಹಪ್ಪ, ಶಿಕ್ಷಕರಾದ ನಂಜುಂಡಪ್ಪ, ಮಂಜುನಾಥ್, ಮಾಲತಿ, ಸೊಣ್ಣೇನಹಳ್ಳಿಯ ವೆಂಕಟೇಶ್, ಪಿಂಡಪಾಪನಹಳ್ಳಿಯ ಆಂಜಿನಪ್ಪ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version