
ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳ ಗೇಟ್ ಬಳಿ ಒಂದು ಕೋಟಿ ಇಪ್ಪತ್ತೈದು ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ನೂತನ ಕಟ್ಟಡಕ್ಕೆ ಗುರುವಾರ ಭೂಮಿ ಪೂಜೆ ಸಲ್ಲಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ನಗರದ ಸುತ್ತಲು ಕೆರೆ ಆವರಿಸಿರುವ ಕಾರಣ ನಗರದಲ್ಲಿ ಸ್ಥಳಾವಕಾಶ ಕೊರತೆ ಇದ್ದ ಕಾರಣ ಇಂದು ನಗರದ ಹೊರವಲಯದ ವರದನಾಯಕನಹಳ್ಳಿ ಗೇಟ್ ಬಳಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ನಿರ್ಮಾಣ ಮಾಡಲಾಗುತ್ತಿದೆ. ನಗರದ ಹೊರವಲಯದಲ್ಲಿ ನಿರ್ಮಿಸುತ್ತಿರುವ ಕಚೇರಿಯನ್ನು ನಿಗಧಿತ ಸಮಯದಲ್ಲಿ ನಿರ್ಮಿಸಿ ಕಾಮಗಾರಿ ಸಂಪೂರ್ಣಗೊಳಿಸಿ ಕೊಡಲಾಗುವುದೆಂದರು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ವರದನಾಯಕನಹಳ್ಳಿ ಸುತ್ತಮುತ್ತಲಿನ ಸರ್ಕಾರಿ ಜಾಗದಲ್ಲಿ ಅನುಭವದಲ್ಲಿರುವ ರೈತರ ಏಳು ಎಂಟು ಕೊಳವೆ ಬಾವಿಗಳಿದ್ದು ಅದಕ್ಕೆ ಪರಿಹಾರ ಕೊಡಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.
ಎಇಇ ರಮೇಶ್, ಎಇ ವೆಂಕಟೇಶ್‍ಮೂರ್ತಿ, ಗುತ್ತಿಗೆದಾರ ನಾರಾಯಣಸ್ವಾಮಿ, ಲಿಖಿತ್, ಎಲ್ ಮಧು, ಎಸ್‍ಎಫ್‍ಸಿಎಸ್ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಕರಗಪ್ಪ, ಮುತ್ತೂರು ವೆಂಕಟೇಶ್, ಹನುಮಂತಪುರ ವೆಂಕಟೇಶ್, ದೊಡ್ಡಪ್ಪ, ಬಾಂಬೆ ನವಾಜ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi