ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿಂದ ತಿರುಪತಿ ತಿಮ್ಮಪ್ಪನ ಸನ್ನಿಧಾನದವರೆಗೆ ಪಾದಯಾತ್ರೆಯನ್ನು ಕೈಗೊಂಡಿರುವ ತಿಮ್ಮಪ್ಪನ ಭಕ್ತಾದಿಗಳು ಗುರುವಾರ ಮುಂಜಾನೆ ಶಿಡ್ಲಘಟ್ಟ ನಗರದ ರಾಷ್ಟ್ರೀಯ ಹೆದ್ದಾರಿ 234ರ ರಸ್ತೆ ಮೂಲಕ ನೆಡೆದುಕೊಂಡು, ತಿಮ್ಮಪ್ಪನ ದರ್ಶನಕ್ಕೆ ಭಕ್ತಾದಿಗಳು ಹೊರಟರು.
ಸುಮಾರು 22 ವರ್ಷಗಳಿಂದ, ಪ್ರತಿ ವರ್ಷವೂ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಮಾರ್ಗದಲ್ಲಿ ಭಕ್ತಾದಿಗಳು ಪಾದಯಾತ್ರೆ ಕೈಗೊಳ್ಳುವ ಮೂಲಕ ಹಳೆಯ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಗೌರಿಬಿದನೂರು ತಾಲ್ಲೂಕಿನ ತೊಂಡೆಬಾವಿಯಿಂದ ಒಂದು ಕುಟುಂಬದ ಅಣ್ಣ-ತಮ್ಮಂದಿರು ಇಬ್ಬರಿಂದ ಪ್ರಾರಂಭವಾದ ಪಾದಯಾತ್ರೆ, ಈಗ 200ಕ್ಕೂ ಹೆಚ್ಚು ಜನ ತಿರುಪತಿಗೆ ಹೊರಡುವ ಕಾರ್ಯಕ್ರಮವನ್ನು ರೂಢಿಸಿಕೊಂಡಿದ್ದಾರೆ. ಪಾದಯಾತ್ರೆ ಹೋಗುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ಬರುವ ಊರುಗಳಿಂದ ಭಕ್ತಾದಿಗಳು ಸೇರ್ಪಡೆಗೊಂಡು ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಾರೆ.
ಸರಿ ಸುಮಾರು 22 ವರ್ಷಗಳಿಂದ ತಿರುಪತಿಗೆ ಪಾದಯಾತ್ರೆ ಹೊರಡುವಂತಹ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಸುಮಾರು 7ರಿಂದ 8 ದಿನದ ಕಾಲ ಕಾಲ್ನಡಿಗೆಯಲ್ಲಿ ದೇವರ ನಾಮಗಳ ಭಜನೆಗಳು ಮಾಡುತ್ತಾ ಪಾದಯಾತ್ರೆ ಮಾಡುತ್ತೇವೆ. ನಮ್ಮ ಉದ್ದೇಶವೇನೆಂದರೆ ರಾಜ್ಯದ ಜನರು ಕೊರೋನಾ ದಿಂದ ತತ್ತರಿಸುತ್ತಿದ್ದಾರೆ ಹಾಗೂ ಲೋಕಕಲ್ಯಾಣಕ್ಕಾಗಿ ಈ ಪಾದಯಾತ್ರೆಯನ್ನು ಮಾಡುತ್ತಿದ್ದೇವೆ ಎಂದು ಶ್ರೀಧರಚಾರಿ ತಿಳಿಸಿದರು
ಪಾದಯಾತ್ರೆಯಲ್ಲಿ ಆವಲರೆಡ್ಡಿ, ಸುಧಾಕರ್, ವಿಜಯ್ ಕುಮಾರ್, ಶ್ರೀನಿವಾಸ್, ರಾಕೇಶ್, ವೆಂಕಟೇಶ್, ಕೃಷ್ಣಮೂರ್ತಿ, ಶನಿವಾರಮರೆಡ್ಡಿ, ನರಸಿಂಹಮೂರ್ತಿ, ಲಕ್ಷ್ಮಿಪತಿ, ರವಿಕುಮಾರ್, ಮಂಜುನಾಥ್, ಶೇಷಾದ್ರಿ ಪಾಲ್ಗೊಂಡಿದ್ದರು.