Home News ಚೀಮಂಗಲದ ಗಣಿತ ಶಿಕ್ಷಕ ಶಿವಕುಮಾರ್ ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಚೀಮಂಗಲದ ಗಣಿತ ಶಿಕ್ಷಕ ಶಿವಕುಮಾರ್ ಅವರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ

0
Best Education Global Video Teacher International Award Shivakumar Sidlaghatta

ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಶಿವಕುಮಾರ್ ಪುದುಚೆರಿಯ ಯುನಿವರ್ಸಲ್ ಟೀಚರ್ ಅಕಾಡೆಮಿ ಆಯೋಜಿಸಿದ್ದ ಎರಡು ಸ್ಪರ್ಧೆಗಳಲ್ಲಿ ವಿಜೇತರಾಗಿ ಪ್ರಶಸ್ತಿಯನ್ನು ಪಡೆದಿದ್ದಾರೆ

 ಪುದುಚೆರಿಯ ಯುನಿವರ್ಸಲ್ ಟೀಚರ್ ಅಕಾಡೆಮಿಯವರು ಹಮ್ಮಿಕೊಂಡಿದ್ದ ಇಂಟರ್ ನ್ಯಾಷನಲ್ ಎಜುಕೇಶನಲ್ ಇ ಕಂಟೆಂಟ್ ಫೆಸ್ಟಿವಲ್-2020 ನಲ್ಲಿ ಶಿಕ್ಷಕರಿಗಾಗಿ 4 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕ ಶಿವಕುಮಾರ್ ಅವರು ಬೆಸ್ಟ್ ಎಜುಕೇಷನಲ್ ವೀಡಿಯೊ ಗ್ಲೋಬಲ್ ಅವಾರ್ಡ್ ಮತ್ತು ಬೆಸ್ಟ್ ಎಜುಕೇಷನಲ್ ಪೋಸ್ಟರ್ ಗ್ಲೋಬಲ್ ಅವಾರ್ಡ್ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.

 ಈ ಸ್ಪರ್ಧೆಯಲ್ಲಿ 958 ಜನರು ಭಾಗವಹಿಸಿದ್ದರು, ಪ್ರಶಸ್ತಿ ಪ್ರದಾನವನ್ನು ವರ್ಚುವಲ್ ಪ್ಲಾಟ್ ಫಾರಂ ಜೂಮ್ ನ ಮೂಲಕ  ಭಾನುವಾರ ನಡೆಸಲಾಯಿತು.

 ಅಂತರ ರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆದ್ದು ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಡಯಟ್ ನ ಪ್ರಾಂಶುಪಾಲ ರಘುನಾಥ ರೆಡ್ಡಿ, ಹಾಗೂ ಡಯಟ್ ನ ಉಪನ್ಯಾಸಕರುಗಳಾದ ಪ್ರವೀಣ್, ಕಾಮಾಕ್ಷಮ್ಮ, ಆನಂದ್ ರವರುಗಳು ಹಾಗೂ ಶಾಲೆಯ ಮುಖ್ಯ ಶಿಕ್ಷಕ  ಎಸ್ ಶಿವಶಂಕರ್ ಅಭಿನಂದಿಸಿದ್ದಾರೆ. 

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version