Sidlaghatta : ಈ ಹಿಂದೆ ಕಡಿಮೆ ಮತದಾನ ಆಗಿರುವಂತಹ ಕೇಂದ್ರಗಳಾದ ನಲ್ಲಿಮರದಹಳ್ಳಿ ಇಮ್ಮಾನುವೇಲ್ ಚರ್ಚ್ ಹಾಗೂ ರಹಮತ್ ನಗರದ ಮತದಾನ ಕೇಂದ್ರಗಳಿಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ ಭಾನುವಾರ ಭೇಟಿ ನೀಡಿ, ವಿಧಾನಸಭಾ ಚುನಾವಣೆ-2023 ರಲ್ಲಿ ಹೆಚ್ಚು ಹೆಚ್ಚಿಗೆ ಮತದಾನ ಮಾಡುವಂತೆ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಜಾಗೃತಿ ಮೂಡಿಸಿದರು.
“ನನ್ನ ಮತ ಮಾರಾಟಕ್ಕಿಲ್ಲ, ನಾನು ಮತದಾನ ತಪ್ಪಿಸುವುದಿಲ್ಲ. ಅದೇ ರೀತಿಯಾಗಿ ಉತ್ತಮ ಪ್ರಜಾ ಪ್ರಭುತ್ವಕ್ಕಾಗಿ ನಾನು ಮತ ಚಲಾಯಿಸುತ್ತೇನೆ ಹಾಗೂ ನೈತಿಕವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತೇನೆ ಎನ್ನುವುದು ಪ್ರತಿಯೊಬ್ಬರ ಧ್ಯೇಯವಾಗಿರಬೇಕು. ಚುನಾವಣೆ ಎಂಬುವುದು ಪ್ರಜಾ ಪ್ರಭುತ್ವದ ಹಬ್ಬ. ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಪ್ರಜಾ ಪ್ರಭುತ್ವವನ್ನು ಬಲಪಡಿಸೋಣ” ಎಂದು ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಮುನಿರಾಜ ತಿಳಿಸಿದರು. ಈ ವೇಳೆ ಮತದಾನದ ಪ್ರತಿಜ್ಞಾ ವಿಧಿಯನ್ನು ಅವರು ಬೋಧಿಸಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್, ಸಿ.ಡಿ.ಪಿ.ಒ ನವತಾಜ್, ಚರ್ಚ್ ಮುಖ್ಯಸ್ಥರು, ಮಸೀದಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.
Taluk Sweep Committee President Muniraja Encourages Ethical Voting in Low-Turnout Areas
Sidlaghatta : Taluk SVEEP Committee President Muniraja, who serves as the executive officer of TPM, visited the polling stations at Nalimadahalli Emmanuel Church and Rahmat Nagar on Sunday. These polling stations have historically had low voter turnout. Muniraja aimed to create awareness and encourage more people to vote in the upcoming assembly elections in 2023.
During his visit, Muniraja emphasized the importance of voting ethically for good governance and strengthening democracy. He reminded people that the election is a festival of people’s rule, and it is their responsibility to participate in the democratic process. To demonstrate his commitment, Muniraja stated that he would not sell his vote and would not miss the opportunity to vote.
In the presence of Municipal Commissioner Srikanth, CDPO Navtaj, church heads, and mosque committee office bearers, Muniraja administered an oath to encourage voting among the public.