Home News ಶಾರದಾ ಪೂಜೆ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಶಾರದಾ ಪೂಜೆ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

0
Rotary Vijayapura President HS Rudreshamurthy speaks at an event about the importance of discipline, punctuality, and moral values in students' lives

Cheemangala, Sidlaghatta : ಸಮಯದ ಬೆಲೆ ಮಕ್ಕಳಿಗೆ ತಿಳಿಯಬೇಕಾಗಿದ್ದು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಸಂಯಮದ ಜೊತೆಗೆ ಸಮಯಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ರೋಟರಿ ವಿಜಯಪುರ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾರದಾ ಪೂಜೆ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಾಥಮಿಕವಾಗಿ ಶಿಕ್ಷಣ ಪಡೆಯುವ ಕಾಲದಿಂದಲೇ ವಿದ್ಯಾರ್ಥಿಗಳು ಉನ್ನತ ಗುರಿಯನ್ನು ಹೊಂದಿರಬೇಕು. ನಿರಂತರವಾದ ಪರಿಶ್ರಮ, ಆಸಕ್ತಿಯ ಮೂಲಕ ಕಲಿಯುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ನೈತಿಕ ಮೌಲ್ಯಗಳನ್ನು ರೂಡಿಸಿಕೊಂಡು ಮಾನವೀಯ ಸಂಬಂದಗಳ ಅರಿವು ಪಡೆಯಬೇಕು. ದಾರ್ಶನಿಕರು, ಮಹಾತ್ಮರ ಜೀವನಾದರ್ಶಗಳು ಯುವಪೀಳಿಗೆಗೆ ಅನುಕರಣೀಯವಾಗಿವೆ. ಪೋಷಕರು ಮಕ್ಕಳ ಉತ್ತಮ ವ್ಯಕ್ತಿತ್ವ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಜವಾಬ್ದಾರಿ ವಹಿಸಬೇಕಿದೆ ಎಂದರು.

ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ಸ್ವಯಂ ಶಿಸ್ತು, ಸಂಯಮ, ಆತ್ಮವಿಶ್ವಾಸ, ಸಾಧಿಸಲೇಬೇಕೆಂಬ ಛಲ, ಸಮಯಪ್ರಜ್ಞೆಯಂತಹ ಮೂಲಗುಣಗಳನ್ನು ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಬೆಳೆಸಬೇಕು, ಸಮಯಪಾಲನೆ, ನಿರಂತರವಾದ ಪರಿಶ್ರಮ, ಆಸಕ್ತಿಯ ಮೂಲಕ ಗುರಿ ಸಾಧಿಸಲು ಪ್ರಯತ್ನಿಸಬೇಕು ಎಂದರು.

ಗಾಯಕ ಸೋರಪ್ಪಲ್ಲಿ ಚಂದ್ರಶೇಖರ್ ಅವರಿಂದ ಗೀತೆಗಳ ಗಾಯನ ನಡೆಯಿತು. ರೋಟರಿ ವತಿಯಿಂದ ಮಕ್ಕಳಿಗಾಗಿ ಗಣಿತದ ಸೂತ್ರಗಳನ್ನು ಬರೆಯುವ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿಜಯಪುರ ರೋಟರಿ ವತಿಯಿಂದ ಚೀಮಂಗಲ ಸರ್ಕಾರಿ ಶಾಲೆಗೆ ಬಿಸಿಯೂಟ ಯೋಜನೆಗೆ ಉಚಿತ ಮಿಕ್ಸರ್‌ಗ್ರೈಂಡರ್‌ನ್ನು ವಿತರಿಸಲಾಯಿತು.

ಚೀಮಂಗಲ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಶಂಕರ್, ವಿಜಯಪುರ ರೋಟರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎ.ಎಂ.ಮಂಜುಳ. ಶಿಕ್ಷಕಿ ಎಂ.ಗಿರಿಜಾಂಬ. ರೋಟರಿ ಕಾರ್ಯದರ್ಶಿ ಎಸ್.ಮಹೇಶ್, ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಮಂಜುನಾಥ್, ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬೈರಾರೆಡ್ಡಿ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಹಾಜರಿದ್ದರು.


Students must Embrace Discipline, Punctuality, and Moral Values

Cheemangala, Sidlaghatta : Rotary Vijayapura’s President, HS Rudreshamurthy, emphasized the importance of instilling discipline, restraint, and punctuality in students’ lives, stating that children need to understand the value of time. Speaking at the Sharada Puja and farewell program for Class 10 students at Cheemangala Government High School in Sidlaghatta taluk, Rudreshamurthy encouraged students to set high goals from primary education and participate in extracurricular activities while also maintaining a focus on learning.

He further emphasized the significance of inculcating moral values and building awareness of human relations, while also highlighting the exemplary lives of seers and Mahatmas for the younger generation to learn from. He noted that parents bear significant responsibility in shaping their children’s personalities.

Meanwhile, Anjaneya, Assistant Director of Akshardasoh Yojana, urged students to cultivate basic qualities such as self-discipline, self-confidence, the desire to achieve, and punctuality from an early age. He stressed the importance of punctuality, continuous hard work, and interest in achieving goals.

During the event, Rotary organized a math formula writing competition for children and distributed prizes to the winners. In addition, Vijayapur Rotary presented a free mixer-grinder to Cheemangala Government School for Bisiuta Yojana. The program also included a performance by singer Sorappalli Chandrasekhar.

Several notable figures attended the event, including Chimangala Government High School Headmaster Sivashankar, Vijayapur Rotary High School Headmaster AM Manjula, and M. Girijamba, the teacher. Also present were Rotary Secretary S. Mahesh, Tummanahalli Government High School Headmaster Manjunath, Dyappanagudi Government High School Headmaster Baira Reddy, and Taluk High School Co-Teachers Association President LV Venkatareddy.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version