Sidlaghatta : ಶಿಡ್ಲಘಟ್ಟ ನಗರದ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ವಿದ್ಯಾರ್ಥಿಗಳು ಬೆಂಗಳೂರಿನ ಪಿ.ಕೆ ಸ್ಫೋರ್ಟ್ಸ್ ಪಣತೂರ್ ನಲ್ಲಿ ಕರ್ನಾಟಕ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ.
ನಿರಂಜನ್, 8 ವರ್ಷದ ಕ್ವಾಡ್ ಸ್ಕೇಟಿಂಗ್ 200 ಮೀ ನಲ್ಲಿ ದ್ವಿತೀಯ ಸ್ಥಾನ ಹಾಗೂ 400 ಮೀ ನಲ್ಲಿ ತೃತೀಯ ಸ್ಥಾನ. ಮಿಥುನ್ ರಾಜ್ 10 ವರ್ಷದ ಕ್ವಾಡ್ ಸ್ಕೇಟಿಂಗ್ 1000 ಮೀ ನಲ್ಲಿ ದ್ವಿತೀಯ ಸ್ಥಾನ ಹಾಗೂ 200 ಮೀ ನಲ್ಲಿ ದ್ವಿತೀಯ ಸ್ಥಾನ ಹಾಗೂ 400 ಮೀಟರ್ ಪ್ರಥಮ ಸ್ಥಾನ. ಅಖಿಲೇಶ್ 10 ವರ್ಷದ ಫ್ಯಾನ್ಸಿ ಇನ್ ಲೈನ್ ಸ್ಕೇಟಿಂಗ್ 200 ಮೀ ನಲ್ಲಿ ಪ್ರಥಮ ಸ್ಥಾನ ಹಾಗೂ ರಿಲೇ ರೇಸ್ ನಲ್ಲಿ ಪ್ರಥಮ ಸ್ಥಾನ. ಹಿಮದ್ರಿಶ್ ರಾಮ್, 6 ವರ್ಷದ ಕ್ವಾಡ್ ಸ್ಕೇಟಿಂಗ್, 200 ಮೀ ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆಂದು ಸ್ಕೇಟಿಂಗ್ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.