News

ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ: ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ಗೆಲುವು

Sidlaghatta state-level football tournament inauguration National Football Club Nehru Stadium

Sidlaghatta : ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ನ್ಯಾಷನಲ್ ಫುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಚಾಲನೆ ದೊರೆತಿದ್ದು, ಉದ್ಘಾಟನಾ ಪಂದ್ಯದಲ್ಲಿ ಶಿಡ್ಲಘಟ್ಟದ ನ್ಯಾಷನಲ್ ಫುಟ್ಬಾಲ್ ಕ್ಲಬ್ ತಂಡ ಒಂದು ಗೋಲು ಗಳಿಸಿ ಚಿಕ್ಕಬಳ್ಳಾಪುರ ತಂಡದ ವಿರುದ್ಧ ಜಯ ಸಾಧಿಸಿತು.

ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ PSI ಕೃಷ್ಣಮೂರ್ತಿ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ, ಸಮಾಜದಲ್ಲಿರುವ ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು; ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಿ ಆರೋಗ್ಯವಂತ ಸಮಾಜ ನಿರ್ಮಿಸಬೇಕು ಎಂದು ಕರೆ ನೀಡಿದರು.

ಕ್ರೀಡಾಮನೋಭಾವದ ಬಗ್ಗೆ ಏನು ಹೇಳಿದರು?

ಕ್ರೀಡೆಯಲ್ಲಿ ಸೋಲು–ಗೆಲುವು ಸಹಜ; ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ತಪ್ಪುಗಳಾಗುತ್ತವೆ. ಅದನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಕ್ರೀಡಾಮನೋಭಾವದಿಂದ ಆಡಬೇಕು ಎಂದು ಅವರು ಸಲಹೆ ನೀಡಿದರು.

ಶಿಡ್ಲಘಟ್ಟ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕ ಉಮೇಶ್ ಅವರು, ಫುಟ್ಬಾಲ್ ಕ್ರೀಡೆಗೆ ರಾಷ್ಟ್ರೀಯ ಮಟ್ಟದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಇದೆ. ಈ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸ್ವತಃ ಆರೋಗ್ಯವಂತರಾಗಿ, ಇತರರಿಗೂ ಆರೋಗ್ಯವಾಗಿರಲು ಪ್ರೇರಣೆ ನೀಡಬೇಕು ಎಂದರು.

ಉದ್ಘಾಟನಾ ಪಂದ್ಯದಲ್ಲಿ ಏನಾಯಿತು?

ಉದ್ಘಾಟನೆಯ ಬಳಿಕ ನ್ಯಾಷನಲ್ ಫುಟ್ಬಾಲ್ ಕ್ಲಬ್ ಹಾಗೂ ಚಿಕ್ಕಬಳ್ಳಾಪುರ ತಂಡಗಳ ಆಟಗಾರರನ್ನು ಪರಿಚಯಿಸಿ ಪ್ರಥಮ ಪಂದ್ಯವನ್ನು ಆರಂಭಿಸಲಾಯಿತು. ರೋಮಾಂಚಕವಾಗಿದ್ದ ಈ ಪಂದ್ಯದಲ್ಲಿ ಶಿಡ್ಲಘಟ್ಟ ತಂಡದ ಆಟಗಾರರು ಒಂದು ಗೋಲು ಗಳಿಸಿ ಗೆಲುವು ಸಾಧಿಸಿದರು.

ಕ್ಲಬ್‌ನ ಶಾಹಿದ್, ಅಬ್ದುಲ್ ವಹಾಬ್, ಮುಜಾಹಿತ್ ಪಾಷಾ, ಶರಪುದ್ದೀನ್, ಮುಸ್ತಕೀಮ್, ಖಾದರ್, ಆರಿಫ್, ಮೊಹಮ್ಮದ್ ಹಫೀಜ್, ಅಹ್ಮದ್, ಮುಷಾಯಿದ್, ಅಮೀರು, ರೆಫರಿಗಳಾದ ಅಕ್ರಂ, ಶಫಿವುಲ್ಲಾ, ಹಿರಿಯ ಆಟಗಾರರು, ಫುಟ್ಬಾಲ್ ಕ್ರೀಡಾಪ್ರೇಮಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Share
error: Content is protected !!