ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ದ್ವಿಚಕ್ರ ವಾಹನ ಯೋಜನೆಯಡಿ ಎರಡು ಹೆಚ್ಚುವರಿ ಚಕ್ರಗಳನ್ನು ಅಳವಡಿಸಿರುವ ದ್ವಿಚಕ್ರ ವಾಹನಗಳನ್ನು 8 ಮಂದಿ ಫಲಾನುಭವಿಗಳಿಗೆ ನೀಡಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಅಂಗವಿಕಲರಿಗೆ ಸ್ವಾವಲಂಬಿ ಜೀವನ ನಡೆಸಲು ದ್ವಿಚಕ್ರ ವಾಹನ ಪೂರಕವಾಗಿದ್ದು, ಅವರು ಕೂಡ ಎಲ್ಲರಂತೆ ಜೀವನ ಪಯಣ ಮುನ್ನಡೆಸಬೇಕು ಎಂಬ ಉದ್ದೇಶದಿಂದ ಸರ್ಕಾರ ಅವರಿಗೆ ವಿಶೇಷ ವಾಹನವನ್ನು ನೀಡುತ್ತಿದೆ. ಅಂಗವಿಕಲರಾದರೂ ಸಾಮಾನ್ಯ ನಾಗರಿಕರಂತೆ ಅವರೂ ಬದುಕುವುದರೊಂದಿಗೆ ತಮ್ಮ ಕುಟುಂಬವನ್ನು ಮುನ್ನಡೆಸಲು ಈ ವಾಹನ ಸಹಕಾರಿಯಾಗಲಿ ಎಂದು ಅವರು ಹಾರೈಸಿದರು.
ಈ ಸಂದರ್ಭದಲ್ಲಿ 8 ಮಂದಿ ಫಲಾನುಭವಿಗಳಾದ ಅಬ್ಲೂಡು ವೆಂಕಟೇಶ್, ದೊಡ್ಡದಾಸೇನಹಳ್ಳಿ ಡಂಕಣಾಚಾರಿ, ಮದ್ದೇನಹಳ್ಳಿ ವೆಂಕಟಲಕ್ಷ್ಮಮ್ಮ, ಗಂಜಿಗುಂಟೆ ಇನಾಯತ್ ಗೌಸ್, ಕೊಂಡೇನಹಳ್ಳಿ ಮುನಿರಾಜು, ಯರ್ರನಾಗೇನಹಳ್ಳಿ ಮಂಜುನಾಥ್, ಇರಗಪ್ಪನಹಳ್ಳಿ ಸುಬ್ಬಾರೆಡ್ಡಿ, ಕಂಬದಹಳ್ಳಿ ಲಕ್ಷ್ಮೀದೇವಿ ಅವರಿಗೆ ವಿಶೇಷ ವಾಹನವನ್ನು ಹಸ್ತಾಂತರಿಸಲಾಯಿತು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಹಮ್ಮದ್ ಉಸ್ಮಾನ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗವೇಣಿ, ಎಂ.ಆರ್.ಡಬ್ಲ್ಯೂ ಡಿ.ಟಿ.ರಾಮಚಂದ್ರಪ್ಪ, ವಿ.ಆರ್. ಡಬ್ಲ್ಯೂ ಗಳಾದ ಸುಶೀಲಾ, ಮುನಿಯಪ್ಪ, ನಾರಾಯಣಸ್ವಾಮಿ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi