Tippenahalli, Sidlaghatta : ಶಿಡ್ಲಘಟ್ಟ ತಾಲೂಕು ತಿಪ್ಪೇನಹಳ್ಳಿ ಯಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಕೌಶಲ್ಯ ಅಭಿವೃದ್ಧಿ ಕೇಂದ್ರ, ಕೃಷಿ ವಿಸ್ತರಣಾ ವಿಭಾಗ ಮತ್ತು ರೇಷ್ಮೆ ವಿಭಾಗದ ಸಹಯೋಗದಲ್ಲಿ “ರೇಷ್ಮೆ ಸಾಕಾಣಿಕೆ, ರೇಷ್ಮೆ ಗೂಡುಗಳಿಂದ ಉಪ ಉತ್ಪನ್ನಗಳ ತಯಾರಿಕೆ ಮತ್ತು ರೇಷ್ಮೆ ತ್ಯಾಜ್ಯ ಮರುಬಳಕೆ” ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ಹಿಪ್ಪುನೇರಳೆ ತೋಟದ ನಿರ್ವಹಣೆ, ರೇಷ್ಮೆ ಹುಳುಗಳ ಪರಿಣಾಮಕಾರಿ ಪಾಲನೆ, ರೇಷ್ಮೆ ಕೃಷಿ ತ್ಯಾಜ್ಯಗಳ ಸಂಸ್ಕರಣೆ ಮತ್ತು ಮರುಬಳಕೆ, ರೇಷ್ಮೆ ಗೂಡಿನಿಂದ ಕರಕುಶಲ ವಸ್ತುಗಳ ತಯಾರಿಕೆ ಕುರಿತು ಗ್ರಾಮಸ್ಥರಿಗೆ ತರಬೇತಿ ನೀಡಲಾಯಿತು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ರೇಷ್ಮೆ ಕೃಷಿ ಬಿ ಟೆಕ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೈಗೊಂಡಿದ್ದ ಗ್ರಾಮೀಣ ಅನುಭವ ಕಾರ್ಯಕ್ರಮದಲ್ಲಿ ಗ್ರಾಮ ನಕ್ಷೆ, ಚಲನ ನಕ್ಷೆ ಮತ್ತು ಸಂಪನ್ಮೂಲ ನಕ್ಷೆಗಳನ್ನು ಬಿಡಿಸಿ ಅವುಗಳ ಮಹತ್ವದ ಬಗ್ಗೆ ತಿಪ್ಪೇನಹಳ್ಳಿ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು.
ಕೃಷಿ ವಿಸ್ತರಣಾ ವಿಭಾಗದ ಮುಖ್ಯಸ್ಥ ಡಾ.ವೈ.ಎನ್.ಶಿವಲಿಂಗಯ್ಯ, ಕೃಷಿ ವ್ಯವಹಾರ ಮತ್ತು ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ.ಸಿದ್ದಯ್ಯ, ರೇಷ್ಮೆ ಕೃಷಿ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥಗೌಡ, ಡಾ.ಟಿ.ಎನ್.ಆನಂದ್, ಡಾ.ಪಲ್ಲವಿ, ಗೀತಾ, ಡಾ.ಯಶಸ್ವಿನಿ, ಗ್ರಾಮಸ್ಥರಾದ ಭರತ್, ಲಕ್ಷ್ಮೀನಾರಾಯಣ್, ನಾಗರಾಜು, ರೈತ ಹಿತ್ತಲಹಳ್ಳಿ ಸುರೇಶ್, ತಿಪ್ಪೇನಹಳ್ಳಿಯ ಡಾ. ಆನಂದ್ ಹಾಜರಿದ್ದರು.