Home News ಅವಧಿ ಮೀರಿದರೂ ಹಣ್ಣಾಗದ ರೇಷ್ಮೆ ಹುಳು : ಕಂಗಾಲಾದ ರೈತ

ಅವಧಿ ಮೀರಿದರೂ ಹಣ್ಣಾಗದ ರೇಷ್ಮೆ ಹುಳು : ಕಂಗಾಲಾದ ರೈತ

0
Silk Department Officials and Scientists Investigate Silkworm Maturity Issue in Kannamangala Sidlaghatta

Sidlaghatta : ರೇಷ್ಮೆ ಹುಳುವಿನ ಜೀವನ ಚಕ್ರದ ಅವಧಿ ಮುಗಿದರೂ ಹಣ್ಣಾಗದೆ ರೇಷ್ಮೆಗೂಡು ಕಟ್ಟದೆ ಇರುವ ಪ್ರಕರಣಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದು, ಈ ಕುರಿತಂತೆ ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ರೇಷ್ಮೆ ಬೆಳೆಗಾರನ ಹುಳು ಸಾಕಣೆ ಮನೆ ಹಾಗೂ ಹಿಪ್ಪುನೇರಳೆ ತೋಟಕ್ಕೆ ರೇಷ್ಮೆ ಇಲಾಖೆ ಅಧಿಕಾರಿಗಳು ಮತ್ತು ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.

ಸಾಮಾನ್ಯವಾಗಿ ರೇಷ್ಮೆ ಹುಳುವಿನ ಜೀವನ ಚಕ್ರದ ಅವದಿ 28 ದಿನಗಳಾಗಿದ್ದು ಅಷ್ಟರೊಳಗೆ ಹುಳು ಹಣ್ಣಾಗಿ ರೇಷ್ಮೆಗೂಡು ಕಟ್ಟಬೇಕಾಗುತ್ತದೆ. ಆದರೆ 28 ದಿನಗಳಲ್ಲ,35 ದಿನಗಳಾಗುತ್ತಿದ್ದರೂ ರೇಷ್ಮೆಹುಳು ಗೂಡು ಕಟ್ಟುವುದಿರಲಿ ಹಣ್ಣಾಗುತ್ತಲೂ ಇಲ್ಲ.

ತಾಲ್ಲೂಕಿನ ಕನ್ನಮಂಗಲದ ರೈತರೊಬ್ಬರ ರೇಷ್ಮೆ ಹುಳುಗಳು ನಾಲ್ಕನೇ ಹಂತ ದಾಟಿ ಏಳೆಂಟು ದಿನಗಳಾದಾಗ ಇನ್ನೇನು ಹಣ್ಣಾಗಿ ಗೂಡು ಕಟ್ಟುತ್ತದೆ , ಒಂದಷ್ಟು ಹಣ ಕೈಗೆ ಬರುತ್ತದೆ ಎನ್ನುವ ಕನಸು ಕಂಡಿದ್ದ ರೈತನಿಗೆ ನಿರಾಸೆಯಾಗಿದೆ. ಅವಧಿ ಮುಗಿದರೂ ರೇಷ್ಮೆ ಹುಳು ಮಾತ್ರ ಹಣ್ಣಾಗಿಲ್ಲ. ಇನ್ನೆಷ್ಟು ದಿನ ಅಂತ ರೇಷ್ಮೆ ಹುಳುವಿಗೆ ಹಿಪ್ಪುನೇರಳೆ ಸೊಪ್ಪನ್ನು ನೀಡುತ್ತಿರಬೇಕೆಂದು ಕಂಗಾಲಾದ ರೈತ ರೇಷ್ಮೆ ಇಲಾಖೆ ಅಧಿಕಾರಿಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾನೆ.

ತಲಘಟ್ಟಪುರದ ರೇಷ್ಮೆ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆಯ ವಿಜ್ಞಾನಿ ಡಾ.ಎನ್.ಜ್ಯೋತಿ, ಡಾ.ಮಹದೇವಪ್ಪ, ಕ್ಯಾಲನೂರು ಕ್ರಾಸ್‍ನ ರೇಷ್ಮೆ ಮಂಡಳಿಯ ಡಾ.ನರೇಂದ್ರಕುಮಾರ್, ರೇಷ್ಮೆಇಲಾಖೆ ಉಪ ನಿರ್ದೇಶಕ ಡಾ.ಆಂಜನೇಯಗೌಡ, ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು ಸ್ಥಳಕ್ಕೆ ಭೇಟಿ ನೀಡಿದ್ದರು.

ಈ ವೇಳೆ ರೇಷ್ಮೆ ಬೆಳೆಗಾರರು ಹಾಗೂ ರೈತ ಮುಖಂಡರೊಂದಿಗೆ ಮಾತನಾಡಿದ ವಿಜ್ಞಾನಿ ಡಾ.ಎನ್.ಜ್ಯೋತಿ, ಈ ಸಮಸ್ಯೆ ಕಳೆದ 2016ರಿಂದಲೂ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಭಾಗಕ್ಕೆ ಮಾತ್ರ ಸಮಸ್ಯೆ ಸೀಮಿತವಾಗಿಲ್ಲ. ರೇಷ್ಮೆ ಹುಳು ಸಾಕಣೆ ಮಾಡುವ ರಾಜ್ಯದ ಇತರೆ ಕಡೆಯೂ ಇತ್ತೀಚಿನ ವರ್ಷಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಳೆನಾಶಕ ಹಾಗೂ ಕೀಟ ನಾಶಕ ಹೆಚ್ಚು ಬಳಸುವ ಕಡೆ ಸಾಮಾನ್ಯವಾಗಿ ಈ ಸಮಸ್ಯೆ ಹೆಚ್ಚೆಚ್ಚು ಕಂಡುಬರುತ್ತಿದೆ ಎಂದರಲ್ಲದೆ ಈ ರೋಗ ನಿಯಂತ್ರಣಕ್ಕೆ ರೈತರು ಮಾಡಬೇಕಾದ ಕ್ರಮಗಳ ಬಗ್ಗೆ ವಿವರಿಸಿ ಹೇಳಿದರು.

ಈ ವೇಳೆ ರೈತರು, ಕೇವಲ ಹಿಪ್ಪುನೇರಳೆ ಸೊಪ್ಪಿನದ್ದೇ ಸಮಸ್ಯೆಯಲ್ಲಿ ಭಿತ್ತನೆ ಪ್ರದೇಶದಲ್ಲೇನಾದರೂ ಸಮಸ್ಯೆಯಾಗಿದೆಯಾ ಅಥವಾ ಚಾಕಿ ಕೇಂದ್ರದಲ್ಲೇನಾದರೂ ಸಮಸ್ಯೆಗಳು ಇವೆಯಾ ಎನ್ನುವುದನ್ನು ಪತ್ತೆ ಹಚ್ಚಬೇಕೆಂದು ವಿಜ್ಞಾನಿಗಳು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಲಘಟ್ಟಪುರದ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ಡಾ ಎನ್ ಜ್ಯೋತಿ, ಡಾ, ಮಹದೇವಪ್ಪ, ಡಾ, ನರೇಂದ್ರ ಕುಮಾರ್, ರೇಷ್ಮೆ ಉಪ ನಿರ್ದೇಶಕ ಡಾ. ಆಂಜನೇಯ ರೆಡ್ಡಿ, ಶಿಡ್ಲಘಟ್ಟ ರೇಷ್ಮೆ ಇಲಾಖೆಯ ತಿಮ್ಮರಾಜ್ ಹಾಜರಿದ್ದರು.


Silk Department Officials and Scientists Investigate Silkworm Maturity Issue

Sidlaghatta : A team of officials from the Silk Department and scientists recently visited a silkworm rearing house and mulberry garden in Kannamangala, Sidlaghatta taluk, to investigate the increasing cases of silkworms not producing cocoons despite exceeding their expected maturity period. The standard life cycle of a silkworm is 28 days, but in this particular case, the silkworms remained underdeveloped even after 35 days.

The disappointed farmer had been feeding mulberry leaves to the silkworms for an extended period, hoping to earn some income. However, the lack of progress was a cause for concern, and the farmer reported the issue to the officials of the Silk Department.

During the visit, the team of scientists, including Dr. N. Jyoti, Dr. Mahadevappa, and Dr. Narendrakumar from the Kyalnur Cross Silk Board, discussed the measures that farmers should take to control this disease with the silk growers and farmer leaders. Dr. N. Jyoti noted that this problem has been occurring in the state since 2016 and is not limited to the Kannamangala area. It has been appearing in other parts of the state as well, where silkworms are reared.

The farmers also requested the officials to investigate if the problem of mulberry is confined to the rearing area or if it extends to the Chaki center as well. The meeting was attended by several officials, including Dr. Anjaneya Gowda, Deputy Director of Silk, and K. Timmaraju, Assistant Director, from the Shidlaghatta Silk Department, among others.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version