ಭಾರತ ದೇಶ ಸ್ವತಂತ್ರ ಕಂಡು 75 ವರ್ಷಗಳಾದ ಹಿನ್ನಲೆಯಲ್ಲಿ ಅಮೃತ ಮಹೋತ್ಸವ ಅಂಗವಾಗಿ ಶಿಡ್ಲಘಟ್ಟದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಸಂಚಾಲಕ ಶ್ರೀಕಾಂತ್ ಮಾತನಾಡಿದರು.
ಸೂರ್ಯ ನಮಸ್ಕಾರ, ಇನ್ನಿತರೆ ಯೋಗಾಸನಗಳು ದೈಹಿಕ ಮಾನಸಿಕ ಸದೃಢತೆಯೊಂದಿಗೆ ದೇಶವನ್ನು ಕಟ್ಟುವ ಕೆಲಸಕ್ಕೂ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ಸೂರ್ಯೋದಯದಿಂದ ಆರಂಭವಾದ ಯೋಗ ಕಾರ್ಯಕ್ರಮದಲ್ಲಿ ಸೂರ್ಯಾಸ್ತದವರೆಗೂ ಯೋಗಪಟುಗಳು ನಿರಂತರವಾಗಿ ಯೋಗಾಸನ ಪ್ರದರ್ಶನ ಮಾಡಿದರು.
ಪ್ರಮುಖವಾಗಿ ಸೂರ್ಯ ನಮಸ್ಕಾರಗಳು ಗಮನ ಸೆಳೆದವು. ಮಕ್ಕಳಿಂದ ಹಿರಿಯ ವಯಸಿನವರು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹೋಮ ಹವನಗಳನ್ನು ಸಹ ನಡೆಸಲಾಯಿತು. ಕೇಶವಮೂರ್ತಿ, ಸುಂದರಾಚಾರಿ, ರಮಣ, ಶ್ರೀನಿವಾಸ್, ಬಚ್ಚಪ್ಪ ಇನ್ನಿತರೆ ಹಿರಿಯ ಯೋಗಪಟುಗಳು ಭಾಗವಹಿಸಿದ್ದರು.