Sidlaghatta : ಬರ ಪರಿಹಾರ ಹಣದ ವಿಚಾರದಲ್ಲಿ ಕರ್ತವ್ಯಲೋಪವೆಸಗಿರುವ ಗ್ರಾಮ ಸಹಾಯಕರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಬೈರಗಾನಹಳ್ಳಿ ಗ್ರಾಮಸ್ಥರು ಮಂಗಳವಾರ ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಕಂದಾಯ ವೃತ್ತದ ಗ್ರಾಮ ಸಹಾಯಕರಾಗಿ ಕೆಲಸ ನಿರ್ವಹಿಸುವ ಬೈರಗಾನಗಾನಹಳ್ಳಿ ಗ್ರಾಮದ ಎಂ.ಕೃಷ್ಣಯ್ಯ ಎಂಬುವವರು ಗ್ರಾಮದಲ್ಲಿ ಬೆಳೆ ಸಮೀಕ್ಷೆ ಮಾಡುವಾಗ ಉದ್ದೇಶಪೂರ್ವಕವಾಗಿ ಗ್ರಾಮಸ್ಥರ ಜಮೀನಿನಲ್ಲಿರುವ ಬೆಳೆಗಳ ಬಗ್ಗೆ ತಪ್ಪು ಮಾಹಿತಿ ನೀಡಿ ಬೆಳೆ ಪರಿಹಾರ ತಪ್ಪಿಸಿರುವುದು ಸೇರಿದಂತೆ ತಮ್ಮದೇ ಸ್ವಂತ ಜಮೀನಿನಲ್ಲಿರುವ ನೀಲಗಿರಿ ಮರಗಳ ಮಾಹಿತಿ ಮರೆಮಾಚಿ ರಾಗಿ ಎಂದು ನಮೂದಿಸಿ ಬೆಳೆ ಪರಿಹಾರ ಪಡೆದುಕೊಳ್ಳುವ ಮೂಲಕ ಸರ್ಕಾರಕ್ಕೆ ವಂಚಿಸಿರುತ್ತಾರೆ.
ಅರ್ಹ ರೈತರಿಗೆ ಬೆಳೆ ಪರಿಹಾರದ ಹಣ ಬಾರದಂತೆ ಹಾಗು ತನ್ನ ಸ್ವಂತ ಜಮೀನಿನಲ್ಲಿರುವ ಬೆಳೆ ಮರೆಮಾಚಿ ಸರ್ಕಾರದ ಹಣವನ್ನು ಪಡೆದುಕೊಂಡಿರುವ ಗ್ರಾಮ ಸಹಾಯಕ ಎಂ.ಕೃಷ್ನಯ್ಯ ವಿರುದ್ದ ಕೂಡಲೇ ಕಾನೂನು ಕ್ರಮ ಜರುಗಿಸುವಂತೆ ಗ್ರಾಮದ ಬಿ.ವಿ.ಮಂಜುನಾಥ್, ಸಂಜೀವಪ್ಪ, ಕೃಷ್ಣಪ್ಪ, ಮುನಿವೆಂಕಟಪ್ಪ, ವೆಂಕಟೇಶಪ್ಪ ಮತ್ತಿತರರು ತಹಸೀಲ್ದಾರ್ ಬಿ.ಎನ್.ಸ್ವಾಮಿ ರಿಗೆ ಮನವಿ ಸಲ್ಲಿಸಿದರು.