ಶಿಡ್ಲಘಟ್ಟ ನಗರ ವ್ಯಾಪ್ತಿಯಲ್ಲಿ ತಂಬಾಕು ನಿಷೇಧ ತಂಡ ಮಂಗಳವಾರ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ, ತಂಬಾಕು ಮಾರಾಟ ಮಾಡುವ ಅಂಗಡಿಯ ಮಾಲೀಕರಿಗೆ ದಂಡ ವಿಧಿಸಿದರು
ಒಟ್ಟು 20 ಪ್ರಕರಣಗಳಿಗೆ ಸಂಬಂಧಿಸಿದಂತೆ 1550 ರೂಗಳ ದಂಡ ವಿಧಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಅಧಿಕಾರಿ ಜೇಮ್ಸ ಥಾಮಸ್, ಜಿಲ್ಲಾಮಟ್ಟದ ಅಧಿಕಾರಿ ರಾಘವೇಂದ್ರ ಮತ್ತು ಮಂಜುನಾಥ್, ತಾಲ್ಲೂಕು ಮಟ್ಟದಿಂದ ತಾಲ್ಲೂಕು ಆರೋಗ್ಯ ನಿರೀಕ್ಷಕ ದೇವರಾಜ್, ಲೋಕೇಶ್, ಧನಂಜಯ, ಕೀರ್ತಿ ಹಾಗೂ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ನಗರ ಸಭೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಹಾಜರಿದ್ದರು.