Sidlaghatta : 2023-24 ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಶಿಡ್ಲಘಟ್ಟ ತಾಲ್ಲೂಕಿನ ವಿದ್ಯಾರ್ಥಿಗಳು ಶೇ 79.19 ರಷ್ಟು ಉತ್ತೀರ್ಣರಾಗುವುದರೊಂದಿಗೆ ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದಿದೆ.
ತಾಲ್ಲೂಕಿನಲ್ಲಿ 1242 ಬಾಲಕರು ಮತ್ತು 1267 ಬಾಲಕಿಯರು ಸೇರಿದಂತೆ ಒಟ್ಟು 2509 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಅವರಲ್ಲಿ 896 ಬಾಲಕರು ಮತ್ತು 1091 ಬಾಲಕಿಯರು ಸೇರಿದಂತೆ ಒಟ್ಟು 1987 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರೇ ಮೇಲುಗೈ ಸಾಧಿಸಿರುವರು. ಗ್ರಾಮೀಣ ಮಕ್ಕಳಲ್ಲಿ 1548 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ನಗರಭಾಗದ 439 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವರು.
ಸರ್ಕಾರಿ ಶಾಲೆಯ 486 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 320 ವಿದ್ಯಾರ್ಥಿಗಳು, ಅನುದಾನರಹಿತ ಶಾಲೆಗಳ 986 ವಿದ್ಯಾರ್ಥಿಗಳು, ವಸತಿಯುತ ಶಾಲೆಗಳ 195 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 61 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಪೂರ್ಣಾಂಕವನ್ನು ಪಡೆದಿರುವರು. ಶೇಕಡಾ ನೂರು ಫಲಿತಾಂಶವನ್ನು 6 ಅನುದಾನರಹಿತ ಮತ್ತು 3 ವಸತಿಯುತ ಶಾಲೆಗಳು ಪಡೆದಿವೆ.
ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ವಿವರ :
ಎನ್.ಬೇಬಿಶ್ರೀ, ಬಿಜಿಎಸ್ ಪಬ್ಲಿಕ್ ಶಾಲೆ (616, 98.56%) ; ಸಿ.ದಿವ್ಯ, ಸುಮುಖ ಪ್ರೌಢಶಾಲೆ (616, 98.56%) ; ಎನ್.ಸಿಂಧು, ಜ್ಞಾನಜ್ಯೋತಿ ಶಾಲೆ (615, 98.4%) ; ಎಂ.ಎಲ್.ಹರ್ಷಿನಿ, ಸೆಂಟ್ ಥಾಮಸ್ ಶಾಲೆ (611, 97.76%) ; ಸಿ.ವಿ.ಶಿವ ಅರ್ಜುನ್, ಬಿಜಿಎಸ್ ಪಬ್ಲಿಕ್ ಶಾಲೆ (610, 97.6%) ; ಎನ್.ಪಿ.ಸಿಂಚನ, ವಿದ್ಯಾ ಜ್ಯೋತಿ ಶಾಲೆ (610, 97.6%) ; ಎಸ್.ವಿ.ಬಿಂದು, ಜ್ಞಾನಜ್ಯೋತಿ ಶಾಲೆ (610, 97.6%) ; ಕೆ.ಎನ್. ನಿಕೃತ್, ಬಿಜಿಎಸ್ ಪಬ್ಲಿಕ್ ಶಾಲೆ (609, 97.44%) ; ಎಂ.ಡಿ.ಸಂಜನಾ, ಕ್ರೆಸೆಂಟ್ ಶಾಲೆ (609, 97.44%) ; ಡಿ.ವಿ.ಸುಚಿತ್ರಾ, ಬಿಜಿಎಸ್ ಪಬ್ಲಿಕ್ ಶಾಲೆ (609, 97.44%)
ರೈತರ ಮಕ್ಕಳದೇ ಮೇಲುಗೈ :
SSLC ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಬಿಜಿಎಸ್ ವಿದ್ಯಾಸಂಸ್ಥೆಯ ಎನ್.ಬೇಬಿಶ್ರೀ (616, 98.56%) ಶಿಡ್ಲಘಟ್ಟ ತಾಲ್ಲೂಕಿಗೇ ಪ್ರಥಮಳಾಗಿದ್ದಾಳೆ.
ತಾಲ್ಲೂಕಿನ ದಿಬ್ಬೂರಹಳ್ಳಿ ಬಳಿಯ ಕುದುಪಕುಂಟೆ ಗ್ರಾಮದ ನಾಗರಾಜು ಮತ್ತು ಲಕ್ಷ್ಮೀ ಎಂಬ ರೈತ ದಂಪತಿಯ ಮಗಳು ಎನ್.ಬೇಬಿಶ್ರೀ, ಪ್ರತಿದಿನ ತನ್ನ ಹಳ್ಳಿಯಿಂದ ಶಾಲೆಗೆ ಪ್ರಯಾಣ ಮಾಡಿ ವಿದ್ಯಾಭ್ಯಾಸ ಮಾಡಿದವಳು.
ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳಾದ ಸಿ.ವಿ.ಶಿವ ಅರ್ಜುನ್ (610, 97.6%) ಚೀಮನಹಳ್ಳಿ ಗ್ರಾಮದ ರೈತರ ಮಗ, ಕೆ.ಎನ್. ನಿಕೃತ್ (609, 97.44%) ಕೆಂಪನಹಳ್ಳಿ ಗ್ರಾಮದ ರೈತರ ಮಗ, ಡಿ.ವಿ.ಸುಚಿತ್ರಾ (609, 97.44%) ದೊಡ್ಡದಾಸೇನಹಳ್ಳಿಯ ರೈತರ ಮಗಳು, ಆರ್.ಹರ್ಷಲ್ (608, 97.28), ಸಿ.ಡಿ.ನಿತ್ಯಶ್ರೀ (607, 97.12%) ಚೀಮನಹಳ್ಳಿ ಗ್ರಾಮದ ರೈತರ ಮಗಳು, ಎಸ್.ಸಂಜನಾ (607, 97.12%), ಎಸ್.ತೇಜಸ್ (607, 97.12%), ಬಿ.ಸಹನ್ ಗೌಡ (603, 96.48%) ದ್ಯಾವಪ್ಪನಗುಡಿ ಗ್ರಾಮದ ರೈತರ ಮಗಳು ಮತ್ತು ಎ.ವಿ.ಹಿತೇಶ್ ಗೌಡ (601, 96.16%) ಕದಿರಿಪಾಳ್ಯದ ರೈತರ ಮಗ.

ಒಟ್ಟಾರೆಯಾಗಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶೇಕಡಾ 96 ಕ್ಕೂ ಹೆಚ್ಚು ಅಂಕಗಳನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಡೆದ ಬಹುತೇಕರು ರೈತ ಕುಟುಂಬದವರೇ ಆಗಿದ್ದಾರೆ.