Sidlaghatta : ಶಿಡ್ಲಘಟ್ಟ ನಗರದ ಅಗ್ರಹಾರ ಬೀದಿಯಲ್ಲಿರುವ ಶ್ರೀ ಏಕಾಂಬರೇಶ್ವರಸ್ವಾಮಿ ದೇವಾಲಯ ಹಾಗೂ ಶ್ರೀ ಶಂಕರಮಠದಲ್ಲಿ ಶಿಡ್ಲಘಟ್ಟ ತಾಲ್ಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ನಗರದಲ್ಲಿ ಭಾನುವಾರ ಶ್ರೀ ಶಂಕರ ಜಯಂತಿ ಮಹೋತ್ಸವ ಮತ್ತು ಸಾಮೂಹಿಕ ಧರ್ಮೋಪನಯನಗಳನ್ನು ಆಯೋಜಿಸಲಾಗಿತ್ತು.
ತ್ರಿಮತಾಚಾರ್ಯರ ಭಾವಚಿತ್ರಗಳೊಂದಿಗೆ ಜಗದ್ಗುರು ಶ್ರೀ ಶಂಕರಾಚಾರ್ಯರ ಉತ್ಸವವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ನಡೆಸಲಾಯಿತು.
“ಜನರಿಗೆ ಕಠಿಣವೆನಿಸಿದ್ದ ವೈದಿಕ ಗ್ರಂಥಗಳ ಗಾಢವಾದ ಅರ್ಥವನ್ನು ಸ್ಪಷ್ಟೀಕರಿಸಿ, ವಿಸ್ತೃತವಾದ ವ್ಯಾಖ್ಯಾನವನ್ನು ಶಂಕರರು ಅನುಗ್ರಹಿಸಿದರು. ಅವರ ಜೀವನವು ಮನುಕುಲಕ್ಕೆ ಸ್ಫೂರ್ತಿಯ ಮೂಲವಾಗಿದೆ. ಅವರ ಸಿದ್ಧಾಂತಗಳು ಮನುಷ್ಯನ ಬದುಕನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಬ್ರಾಹ್ಮಣ ಮಹಾಸಭಾ ಮಾಜಿ ಜಿಲ್ಲಾ ಅಧ್ಯಕ್ಷ ಎಂ.ವಾಸುದೇವರಾವ್ ತಿಳಿಸಿದರು.
ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎ.ಎಸ್.ರವಿ, ಎಸ್.ಆರ್.ಶ್ರೀನಾಥ್, ಎಸ್.ಆರ್.ಶ್ರೀನಿವಾಸಮೂರ್ತಿ, ಎ.ಎಸ್.ಉದಯ್, ಕೆ.ಮಂಜುನಾಥ್, ಎನ್.ಜಿ.ಮಂಜುನಾಥ್, ಕೆ.ವಿ.ಸುಬ್ರಮಣ್ಯಶಾಸ್ತ್ರಿ, ಬಿ.ಆರ್.ನಟರಾಜ್ ಹಾಜರಿದ್ದರು.