![16Feb24Sd2a Sidlaghatta Savita Maharshi Jayanti Programme](https://www.sidlaghatta.com/wp-content/uploads/2024/02/16Feb24Sd2a.jpg)
Sidlaghatta : ಸವಿತಾ ಮಹರ್ಷಿಗಳ ಜ್ಞಾನ ಸಮಸ್ತ ಸಮಾಜಕ್ಕೆ ಮಾದರಿಯಾಗಿದೆ ಎಂದು ತಹಸೀಲ್ದಾರ್ ಬಿ.ಎನ್.ಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಬಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸವಿತಾ ಮಹರ್ಷಿ ಅಂದರೆ ನಮ್ಮ ಪುರಾಣಗಳಲ್ಲಿ ವಿಷ್ಣು ಎಂದು ಅರ್ಥ, ವಿಷ್ಣುವಿನ ಎರಡು ಕಣ್ಣುಗಳು ಸೂರ್ಯ ಮತ್ತು ಚಂದ್ರ ಅಂತಹ ಸೂರ್ಯ ದೇವರನ್ನು ಸವಿತಾ ಮಹರ್ಷಿಯವರಿಗೆ ಹೋಲಿಸುತ್ತಾರೆ. ಇಂತಹ ಮಹಾತ್ಮರ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯುತ್ತಾ ಸಧೃಡ ದೇಶ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದರು.
ಸವಿತಾ ಸಮಾಜದ ಯುವ ಮುಖಂಡ ಸಾದಲಿ ನರಸಿಂಹಮೂರ್ತಿ ಅವರು ಮಾತನಾಡಿ ಶ್ರೀ ಸವಿತಾ ಮಹರ್ಷಿ ಯವರ ಇತಿಹಾಸವನ್ನು ಸವಿಸ್ತಾರವಾಗಿ ತಿಳಿಸಿದರು
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ಎನ್.ಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಜಗದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್, ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ದೇವರಾಜ್, ಖಜಾಂಚಿ ಮುನಿಕೃಷ್ಣ, ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.