ಶಿಡ್ಲಘಟ್ಟ ತಾಲ್ಲೂಕು ಸಮತಾ ಸೈನಿಕ ದಳದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಚಿಕ್ಕಬಳ್ಳಾಪುರ ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಜಿ.ಸಿ. ವೆಂಕಟರಮಣಪ್ಪ ಅಧ್ಯಕ್ಷತೆಯಲ್ಲಿ ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಸಮಿತಿಯ ಸರ್ವ ಸದಸ್ಯರ ಅಭಿಪ್ರಾಯದ ಮೇರೆಗೆ ಆಯ್ಕೆಮಾಡಲಾಯಿತು .
ಈ ಹಿಂದೆ ಇದ್ದ ಅಧ್ಯಕ್ಷರ ಅವಧಿ ಮೂರು ವರ್ಷಗಳು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತಾಲ್ಲೂಕಿನ ಹೊಸ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಎಂ.ವಿಜಯಕುಮಾರ್, ಗೌರವ ಅಧ್ಯಕ್ಷ ಮುನಿ ಆಂಜಿನಪ್ಪ, ಕಾರ್ಯಾಧ್ಯಕ್ಷ ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಎಸ್ ವೇಣುಗೋಪಾಲ್, ಉಪಾಧ್ಯಕ್ಷರಾಗಿ ಅಮರೇಶ್, ಮಂಜುನಾಥ್, ಮುನಿಕೃಷ್ಣಪ್ಪ, ಡಿ.ಎನ್ ಮುನಿರಾಜ, ನರಸಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಗಂಗಾಧರ್, ಆಂಜಿನಪ್ಪ, ದ್ಯಾವಪ್ಪ, ಮೂರ್ತಿ,ಪರಮೇಶ್, ಖಜಾಂಜಿ ನಂಜಪ್ಪ, ಪ್ರಧಾನ ಗೌರವಧ್ಯಕ್ಷ ಈರಪ್ಪ, ತಾಲ್ಲೂಕು ಕಲಾ ಮಂಡಳಿ ಪದಾಧಿಕಾರಿಗಳ ಅಧ್ಯಕ್ಷ ಚಂದ್ರು, ಗೌರವ ಅಧ್ಯಕ್ಷ ವೆಂಕಟರಾಜು, ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಹರಳಹಳ್ಳಿ ನವೀನ್ , ಕಾರ್ಯಾಧ್ಯಕ್ಷ ನಾಗರಾಜ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅವರುಗಳನ್ನು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಜಿ ಸಿ ವೆಂಕಟರಮಣಪ್ಪ, ಜಿಲ್ಲಾ ಉಪಾಧ್ಯಕ್ಷ ಈಶ್ವರಪ್ಪ, ನೂತನ ಗೌರವಾಧ್ಯಕ್ಷ ದ್ಯಾವಕೃಷ್ಣಪ್ಪ, ರಮೇಶ್, ಟಿ.ವಿ.ಮುನಯ್ಯ ಹಾಜರಿದ್ದರು.