
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ಯಾವುದೇ ಸರಕಾರಿ ಅನುಮೋದನೆ ಇಲ್ಲದೆ ಗೋವರ್ಧನ್ ಎಂಬುವ ವ್ಯಕ್ತಿ ನಡೆಸುತ್ತಿದ್ದ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅನಧಿಕೃತವಾಗಿ ವೈದ್ಯಕೀಯ ಸೇವೆ ಒದಗಿಸುತ್ತಿದ್ದ ಈ ಕ್ಲಿನಿಕ್ ಬಗ್ಗೆ ದೂರುಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ನೇತೃತ್ವದಲ್ಲಿ ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಡಾ. ಯಶವಂತ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ತಜ್ಞರ ಪರಿಶೀಲನೆಯಾದ ಬಳಿಕ, ಕ್ಲಿನಿಕ್ ಯಾವುದೇ ಮಾನ್ಯತೆ ಪಡೆಯದೆ ಸೇವೆ ನೀಡುತ್ತಿರುವುದು, ರೋಗಿಗಳಿಗೆ ಸರಿಯಾದ ದಾಖಲೆಗಳಿಲ್ಲದೆ ಔಷಧಿ ನೀಡುತ್ತಿರುವುದು ಹಾಗೂ ಅಕ್ರಮವಾಗಿ ಚಿಕಿತ್ಸೆಯನ್ನು ಮುಂದುವರಿಸುತ್ತಿರುವುದು ಬೆಳಕಿಗೆ ಬಂದಿದೆ. ಇದನ್ನು ತಕ್ಷಣವೇ ತಡೆಗಟ್ಟಲು ಅಧಿಕಾರಿಗಳು ಕ್ಲಿನಿಕ್ ಅನ್ನು ಸೀಜ್ ಮಾಡಿದ್ದಾರೆ.
ತಾಲ್ಲೂಕಿನ ಸಾದಲಿ ಗ್ರಾಮದಲ್ಲಿ ಅನಧಿಕೃತವಾಗಿ ಗೋವರ್ಧನ್ ಎನ್ನುವ ವ್ಯಕ್ತಿ ನಡೆಸುತ್ತಿದ್ದ ಕ್ಲಿನಿಕ್ ಗೆ ಬೀಗ ಜೆಡೆದು ಅರೋಗ್ಯ ಅಧಿಕಾರಿಗಳು ನೋಟೀಸ್ ನೀಡಿದರು.