Sidlaghatta : ಕಳೆದ ನಾಲಕ್ಕು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿರುವ ಕಾರಣ ಶಿಡ್ಲಘಟ್ಟ ನಗರದ ರಾಘವೇಂದ್ರ ಸ್ವಾಮಿ ದೇವಾಲಯ ಹತ್ತಿರದ ಮುತ್ತೂರು ಬೀದಿಯ ನಿವಾಸಿ ಶಿಕ್ಷಕ ಚಂದ್ರಶೇಖರ್ ಅವರ ಮನೆ ಕುಸಿದಿದ್ದು, ಅವಶೇಶಗಳಡಿ ಸಿಲುಕಿದ್ದ ಶಿಕ್ಷಕರನ್ನು ನಗರಸಭೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಚಂದ್ರಶೇಖರ್ ರವರು ಬೆಳಗ್ಗೆ ಏಳು ಗಂಟೆಯಲ್ಲಿ ಮನೆ ಹಿಂದಿನ ರೂಮಿನಲ್ಲಿ ಲೈಟ್ ಸ್ವಿಚ್ ಆಫ್ ಮಾಡಲು ಹೋದಾಗ ಮನೆ ಗೋಡೆ ಕುಸಿದು ಬಿದ್ದು ಪರಿಣಾಮ ಚಂದ್ರಶೇಖರ್ ಮನೆಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದರು ಈ ಸಮಯದಲ್ಲಿ ಇದೇ ಬೀದಿಯ ಪತ್ರಕರ್ತ ಶಶಿಕುಮಾರ್ ರವರು ಅಲ್ಲಿಗೆ ಬಂದು ನಗರಸಭೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದರು.
ಸಕಾಲಕ್ಕೆ ಆಗಮಿಸಿದ ನಗರಸಭೆ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದವರು ಮನೆಯಲ್ಲಿ ಸಿಲುಕುಕೊಂಡಿದ್ದ ಚಂದ್ರಶೇಖರ್ ರಕ್ಷಣೆಗೆ ಬಂದು ಅವರ ಮೇಲೆ ಬಿದ್ದಿದ್ದ ಮಣ್ಣನ್ನು ಹೊರತೆಗೆದು ಅವರನ್ನು ಮೇಲೆ ಎತ್ತಿ ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ತೆರಳಿಸಿದರು ಸದ್ಯ ಮನೆಯಲ್ಲಿ ಚಂದ್ರಶೇಖರ್ ಅವರು ಅಕ್ಕ ಮಾತ್ರ ಇದ್ದು ಯಾರಿಗೂ ಯಾವುದೇ ಪ್ರಾಣಪಾಯವಾಗಿಲ್ಲ.