Sidlaghatta : ಶಿಡ್ಲಘಟ್ಟ ಗ್ರಾಮಾಂತರ ಠಾಣೆ (Rural Police Station) ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಗೆ (Circle Inspector Office) ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿಯಿಂದ 17 ಲಕ್ಷ ರೂ.ವೆಚ್ಚದಲ್ಲಿ ಖರೀದಿಸಿದ ಎರಡು ಜೀಪುಗಳನ್ನು ಹಸ್ತಾಂತರಿಸಿ ಶಾಸಕ ವಿ.ಮುನಿಯಪ್ಪ (V Muniyappa) ಮಾತನಾಡಿದರು.
ಪೊಲೀಸರು ಒತ್ತಡ ಹಾಗೂ ಪ್ರಭಾವಕ್ಕೆ ಒಳಗಾಗದೆ, ಜಾತಿ ಧರ್ಮ ಹಾಗೂ ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕಿದೆ. ಆಗಲೆ ಜನ ಸಾಮಾನ್ಯರು ಪೊಲೀಸ್ ವ್ಯವಸ್ಥೆ ಹಾಗೂ ಕಾನೂನಿನ ಬಗ್ಗೆ ನಂಬಿಕೆಯಿಟ್ಟು ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಪೊಲೀಸರು ಜನ ಸಾಮಾನ್ಯರೊಂದಿಗೆ ಸೌಜನ್ಯವಾಗಿ ವರ್ತಿಸುವ, ಸಹನೆಯಿಂದ ತನಿಖೆ ನಡೆಸಿ ನ್ಯಾಯ ನೀಡುವ ಕೆಲಸಕ್ಕೆ ಇನ್ನಷ್ಟು ಒತ್ತು ನೀಡಬೇಕು. ಆಗಲೆ ಎಲ್ಲರು ಸುಖ ಶಾಂತಿ ನೆಮ್ಮದಿಯ ಬದುಕು ನಡೆಸಲು ಸಾಧ್ಯ, ಹಾಗೂ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನೆಲೆಸುತ್ತದೆ ಎಂದರು.
ಗ್ರಾಮಾಂತರ ಠಾಣೆಯ ಆವರಣದಲ್ಲಿನ ಗಣೇಶನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಹೊಸ ವಾಹನಗಳ ಕೀಗಳನ್ನು ಹಸ್ತಾಂತರಿಸಿದರು.
ಎಎಸ್ಪಿ ಕುಶಾಲ್ ಚೌಕ್ಸೆ, ತಹಶೀಲ್ದಾರ್ ರಾಜೀವ್, ಸಿಪಿಐ ಧರ್ಮೇಗೌಡ, ಗ್ರಾಮಾಂತರ ಠಾಣೆಯ ಎಸ್‍ಐ ಕೆ.ಸತೀಶ್, ಶಿಡ್ಲಘಟ್ಟ ನಗರ ಠಾಣೆಯ ಎಸ್‍ಐ ಸುನಿಲ್, ಎಲ್.ಮಧು, ಭೀಮೇಶ್, ವೆಂಕಟೇಶ್, ಸಾಧಿಕ್ ಹಾಜರಿದ್ದರು.