
Shettyhalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ರೈತ ಎಸ್.ಆರ್. ಮಂಜುನಾಥ್ ಅವರ ತೋಟದಲ್ಲಿ ಬೆಳೆದ ಶಾಮಂತಿ ಹೂ ಬೆಳೆ ಕೀಟನಾಶಕ ಸಿಂಪಡಣೆ ಬಳಿಕ ಏಕಾಏಕಿ ಬಾಡಲು ಆರಂಭಿಸಿದ ಪರಿಣಾಮ ಲಕ್ಷಾಂತರ ರೂ. ನಷ್ಟವಾಗಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.
25 ಗುಂಟೆ ಜಮೀನಿನಲ್ಲಿ ತ್ರಿಶಾಂಕಮ್ ತಳಿಯ ಶಾಮಂತಿ ಹೂ ಬೆಳೆ ಬೆಳೆದಿದ್ದ ರೈತ, ಖಾಸಗಿ ಅಂಗಡಿಯಿಂದ ಖರೀದಿಸಿದ ಕೀಟನಾಶಕವನ್ನು ಸಿಂಪಡಿಸಿದ ನಂತರ ಹೂವು ಹಾಗೂ ಗಿಡಗಳು ಬೆಂಕಿಗೆ ಸುಟ್ಟಂತೆ ಬಾಡಲಾರಂಭಿಸಿದವು.
ಸಂಘಟನೆ ಹಾಗೂ ಇಲಾಖೆಗಳ ಗಮನ ಸೆಳೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಜಾಗೃತ ದಳದ ಪ್ರತಿನಿಧಿಗಳು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತ ಹೂವಿನ ಸಸಿ ಖರೀದಿ ವಿವರಗಳು ಹಾಗೂ ಬಳಸದ ಕೀಟನಾಶಕದ ದಾಖಲೆಗಳನ್ನು ಅಧಿಕಾರಿಗಳಿಗೆ ಒದಗಿಸಿದ್ದು, ಸಂಬಂಧಿಸಿದ ಕಂಪನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ..