Sidlaghatta : ಹಾಲಿನ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ರೈತರದ್ದಾಗಿದೆ. ಹಾಲು ಉತ್ಪಾದಕರು ಡೈರಿಗಳಿಗೆ ಹಾಕುವ ಹಾಲಿನ ಗುಣಮಟ್ಟ ಉತ್ತಮವಾಗಿ ಇದ್ದಲ್ಲಿ, ಉತ್ಪಾದಕರಿಗೆ ಉತ್ತಮ ಬೆಲೆ ಸಿಗುತ್ತದೆ. ಸಾಂಘಿಕ ಶಕ್ತಿಯಿಂದ ಸಹಕಾರ ಸಂಘವನ್ನು ಉತ್ತಮವಾಗಿ ಬೆಳೆಸಿ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ನಗರದ ಹೊರವಲಯದ ನಲ್ಲಿಮರದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಪಕ್ಷಾತೀತವಾಗಿ ಸಹಕಾರ ಸಂಘವನ್ನು ಕಟ್ಟಿ ಬೆಳೆಸಬೇಕು. ಹಾಲು ಉತ್ಪಾದಕರೆಲ್ಲೂ ಒಂದೇ. ಸಂಘದಲ್ಲಿ ಜಾತಿ, ಧರ್ಮ, ರಾಜಕೀಯ ಪಕ್ಷ ನುಸುಳದಂತೆ ನೋಡಿಕೊಳ್ಳಿ. ರೈತರು ಹೈನುಗಾರಿಕೆಯಲ್ಲಿ ಯಶಸ್ಸನ್ನು ಕಾಣುವಂತಾಗಲಿ ಎಂದು ಹೇಳಿದರು.
ಉತ್ತಮ ಗುಣಮಟ್ಟದ ಹಾಲು ಶೇಖರಣೆಯಾದಾಗ ಹಾಲಿಗೆ ಒಳ್ಳೆಯ ಬೆಲೆ ಸಿಗುತ್ತದೆ. ಆ ಮೂಲಕ ಸಹಕಾರ ಸಂಘವೂ ಉತ್ತಮವಾಗಿ ಅಭಿವೃದ್ಧಿಯಾಗುತ್ತದೆ ಮತ್ತು ಹಾಲು ಉತ್ಪಾದಕರಿಗೂ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದರು.
ನಲ್ಲಿಮರದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ನರಸಿಂಹಮೂರ್ತಿ, ಕ.ಹಾ.ಮ ನಿರ್ದೇಶಕ ಆರ್.ಶ್ರೀನಿವಾಸ್, ಕೆ.ಗುಡಿಯಪ್ಪ, ಕೋಚಿಮುಲ್ ಉಪವ್ಯವಸ್ಥಾಪಕ ಬಿ.ಆರ್.ರವಿಕಿರಣ್, ಅಭಿವೃದ್ಧಿ ಅಧಿಕಾರಿ ಮಂಜುನಾಥ, ಎಂ.ಪಿ.ಸಿ.ಎಸ್. ನಿರ್ದೇಶಕರಾದ ಎಂ.ಮುನಿಯಪ್ಪ, ಸಿ.ದೇವರಾಜು, ಎನ್.ಮುನಿಯಪ್ಪ, ಎಂ.ಮುರಳಿಕೃಷ್ಣ, ವಿ.ಮಂಜುನಾಥ, ಎಂ.ಮುರಳಿ, ಜೆ.ಸದಾಶಿವಪ್ಪ, ಎನ್.ಸುಧಾಕರ್, ವಿಜಯಮ್ಮ, ಡಿ. ವರಲಕ್ಷ್ಮಮ್ಮ, ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ಸದಸ್ಯರಾದ ಲಕ್ಷ್ಮಯ್ಯ, ಕೃಷ್ಣಮೂರ್ತಿ, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ಹಾಜರಿದ್ದರು.