ಶಿಡ್ಲಘಟ್ಟ ನಗರಸಭೆಯ ಉಪಾಧ್ಯಕ್ಷ ಸೇರಿದಂತೆ ಆರು ಮಂದಿ ನಗರಸಭೆ ಸದಸ್ಯರ ಮೇಲೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಾತಿ ನಿಂಧನೆ ಕೇಸು ದಾಖಲಾಗಿದೆ
ನಗರಸಭೆ ಅಧ್ಯಕ್ಷೆ JDS ನ ಸಿ.ಎಂ.ಸುಮಿತ್ರರಮೇಶ್ ಅವರು ಉಪಾಧ್ಯಕ್ಷ BSP ಪಕ್ಷದ ಬಿ.ಅಪ್ಸರ್‍ಪಾಷ, ಸದಸ್ಯರಾದ Congress ನ ಎಸ್.ಎಂ.ಮಂಜುನಾಥ್, ಅನಿಲ್ ಕುಮಾರ್ ಹಾಗೂ ರಿಯಾಜ್ ಪಾಷ ವಿರುದ್ದ ಜಾತಿ ನಿಂದನೆ ಕೇಸನ್ನು ದಾಖಲಿಸಿದ್ದಾರೆ.
ಹಾಗೆಯೆ ಸದಸ್ಯ Congress ನ ಕೃಷ್ಣಮೂರ್ತಿ ಅವರು ಸದಸ್ಯರಾದ BJP ಯ ಮಿಲ್ಟ್ರಿ ರಘು, JDS ಬೆಂಬಲಿತ ಕಿಷನ್ (ನಂದು) ವಿರುದ್ದ ಜಾತಿ ನಿಂದನೆ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ಫೆ.5 ರಂದು ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ತುರ್ತು ಸಭೆ ನಡೆದಿದ್ದು ಸಭೆಯಲ್ಲಿ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು ಎಂದು ಅಪ್ಸರ್‍ಪಾಷ, ಮಂಜುನಾಥ್, ಅನಿಲ್‍ಕುಮಾರ್, ರಿಯಾಜ್ ಪಾಷ ವಿರುದ್ದ ದೂರಿದ್ದಾರೆ.
ಇತ್ತ ಕೃಷ್ಣಮೂರ್ತಿ ಅವರು ಸಭೆ ಮುಗಿಸಿಕೊಂಡು ಹೊರಗೆ ಬಂದಾಗ ಸದಸ್ಯ ರಿಯಾಜ್‍ನನ್ನು ತಮ್ಮೊಂದಿಗೆ ಕರೆದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ನೂಕಾಟ ತಳ್ಳಾಟ ನಡೆದಾಗ ರಘು ಹಾಗೂ ನಂದುಕಿಷನ್ ಅವರು ನನ್ನನ್ನು ಜಾತಿ ನಿಂದನೆ ಮಾಡಿದರೆಂದು ಕೃಷ್ಣಮೂರ್ತಿ ದೂರಿದ್ದಾರೆ.