Sidlaghatta : ರಾಷ್ಟ್ರೀಯ ಜೀವನೋಪಾಯ ಅಭಿಯಾನ (ಡೇ-ನಲ್ಮ್) ಹಾಗೂ ಪಿಎಂ ಸ್ವ-ನಿಧಿ ಯೋಜನೆಯಡಿ ಬೀದಿ ಬದಿಯ ವ್ಯಾಪಾರಸ್ಥರಿಗೆ ಸಾಲ ನೀಡುವುದರಲ್ಲಿ ಶೇ 140 ರಷ್ಟು ಗುರಿ ಸಾಸಿದ ಶಿಡ್ಲಘಟ್ಟ ನಗರಸಭೆಗೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಲಾಗಿದೆ.
ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಶರಣ ಪ್ರಕಾಶ ರುದ್ರಪ್ಪ ಪಾಟೀಲ್ ಅವರು ಪ್ರಶಸ್ತಿಯನ್ನು ಶಿಡ್ಲಘಟ್ಟ ನಗರಸಭೆಗೆ ಪ್ರಧಾನ ಮಾಡಿದ್ದಾರೆ.
ರಾಜ್ಯ ಮಟ್ಟದ ಪ್ರಶಸ್ತಿಯನ್ನು ನಗರಸಭೆ ಪೌರಾಯುಕ್ತ ಮಂಜುನಾಥ್, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ವೆಂಕಟಾಚಲಪತಿ, ಸಮುದಾಯ ಸಂಘಟಕರಾದ ಕೆ.ಎಂ. ಸುಧಾ ಇನ್ನಿತರರು ಸ್ವೀಕರಿಸಿದರು.
ಅಭಿವೃದ್ದಿ ಆಯುಕ್ತರು ಹಾಗೂ ಅಪರ ಕಾರ್ಯದರ್ಶಿ ಉಮಾ ಮಹದೇವನ್, ಅಭಿಯಾನ ನಿರ್ದೇಶಕ ಪಿ.ಐ.ಶ್ರೀವಿದ್ಯಾ, ಪಿಎಂ ಸ್ವ-ನಿಧಿ ಯೋಜನೆಯ ಅನುಷ್ಟಾನಾಕಾರಿ ಎಂ.ಪ್ರಸಾದ್ ಹಾಜರಿದ್ದರು.