![17OctSd02a Sidlaghatta Melur SKDRDP](https://www.sidlaghatta.com/wp-content/uploads/2022/10/17OctSd02a.jpg)
Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಸಮುದಾಯ ಭವನದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ (SKDRDP) ವತಿಯಿಂದ ಆಯೋಜಿಸಿದ್ದ ಜನಮಂಗಲ ಕಾರ್ಯಕ್ರಮದಡಿಯಲ್ಲಿ 22 ಮಂದಿ ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳನ್ನು ವಿತರಣೆ ಮಾಡಿ ತಾಲ್ಲೂಕು ಪಂಚಾಯಿತಿ EO ಮುನಿರಾಜು ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯು ಶಿಕ್ಷಣ, ಆರೋಗ್ಯ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಜೊತೆಗೆ ವಿಶೇಷ ಚೇತನರಿಗೆ ನೀಡುತ್ತಿರುವ ಸವಲತ್ತುಗಳು (ಸಲಕರಣೆಗಳು) ಅತ್ಯಂತ ಮಾನವೀಯತೆಯಿಂದ ಕೂಡಿದೆ. ಸಂಸ್ಥೆಯಿಂದ ರಾಜ್ಯಾಧ್ಯಂತ ದುರ್ಬಲ ವರ್ಗದವರ ಏಳಿಗೆಗಾಗಿ ಹೊಸ ಹೊಸ ಕಾರ್ಯಕ್ರಮಗಳು ನಡೆಯುತ್ತಿದ್ದು ಇದರ ಸದ್ಬಳಕೆ ಆದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗುವುದು. ಇನ್ನೂ ಹೊಸ ಚಿಂತನೆಗಳು ಪೂಜ್ಯರಲ್ಲಿ ಮೂಡಲು ಪ್ರೇರಣೆಯಾಗಬಹುದು ಎಂದು ಅವರು ತಿಳಿಸಿದರು.
ಜಿಲ್ಲಾ ನಿರ್ದೇಶಕ ಸಿ.ಎಸ್.ಪ್ರಶಾಂತ್ ಮಾತನಾಡಿ ಪರಮಪೂಜ್ಯ ಧರ್ಮಾಧಿಕಾರಿಗಳು ಬದುಕನ್ನು ಕಟ್ಟಲು ಒಂದು ಕಡೆ ಅರ್ಥಿಕ ಸಹಾಯವನ್ನು ಬ್ಯಾಂಕಿನ ಮೂಲಕ ಕೊಡಿಸಿದರೆ, ಇನ್ನೊಂದು ಕಡೆ ಬದುಕಿನ ಆಶಾ ಭಾವನೆಯನ್ನು ಕಳೆದುಕೊಂಡಿರುವ ಸಾವಿರಾರು ವಿಶೇಷ ಚೇತನರಿಗೆ ಆತ್ಮಸ್ಥೈರ್ಯವನ್ನು ನೀಡಲು ವೀಲ್‌ಚೇರ್, ವಾಟರ್‌ಬೆಡ್, ಯೂ ಶೇಪ್ ವಾಕರ್, ವಾಕಿಂಗ್ ಸ್ಟಿಕ್ ಮತ್ತಿತರ ಸಲಕರಣೆಗಳನ್ನು ನೀಡುವ ಮೂಲಕ ಇನ್ನೊಬ್ಬರಿಗೆ ಹೊರೆಯಾಗದಂತೆ ಬದುಕಲು ಪ್ರೇರಣೆ ನೀಡುತ್ತಿದ್ದಾರೆ. ಈ ದಿನ ತಾಲ್ಲೂಕಿನ ೨೨ ಮಂದಿಗೆ ಸೌಲಭ್ಯವನ್ನು ಒದಗಿಸಿಕೊಟ್ಟು ಬದುಕಿಗೆ ಆಸರೆಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ತ್ಯಾಗರಾಜ್, ಗ್ರಾ.ಪಂ ಉಪಾಧ್ಯಕ್ಷೆ, ವನಿತಾ ತಿರುಮಲೇಶ್, ರಾಜ್ ಕುಮಾರ್ ಅಭಿಮಾನಿ ಬಳಗದ ದರ್ಮೇಂದ್ರ, ಶ್ರೀನಿವಾಸ್, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್‌ಕುಮಾರ್, ಮಳ್ಳೂರು ವಲಯದ ಅಧ್ಯಕ್ಷೆ ಮಂಜುಳಾ, ಮೇಲ್ವಿಚಾರಕಿ ಅನಿತಾ ಉಪಸ್ಥಿತರಿದ್ದರು.