Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಗುರುವಾರ ಒಟ್ಟು 1046 ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನೀರು ಒದಗಿಸುವ ಯೋಜನೆಯ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ ನೆರವೇರಿತು.
ಮೇಲೂರು ಗ್ರಾಮದ 865 ಮನೆಗಳು ಮತ್ತು ರಾಗಿಮಾಕಲಹಳ್ಳಿಯ 181 ಮನೆಗಳು ಸೇರಿದಂತೆ ಒಟ್ಟು 1046 ಮನೆಗಳಿಗೆ ಸುಮಾರು 1 ಕೋಟಿ 75 ಲಕ್ಷ ರೂ.ಗಳ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಸಿಗುವ ಯೋಜನೆ ಪ್ರಾರಂಭಗೊಂಡಿತು.
ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ.ಉಮೇಶ್ ಮಾತನಾಡಿ, ಜಲ ಜೀವನ್ ಮಿಷನ್ ಯೋಜನೆಯು ಅತ್ಯುತ್ತಮವಾಗಿದೆ. ಇದರ ಮೂಲಕ ನೀರಿಗೆ ಪರದಾಡುವುದನ್ನು ತಪ್ಪಿಸಿ, ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು. ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ಸ್ಥಳೀಯ ಜನರ ಸಹಕಾರ ಅಗತ್ಯ ಎಂದರು.
ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನದ ವಿಚಾರದಲ್ಲಿ ಯಾವುದೇ ರಾಜಕೀಯ ಬೆರೆಸದೆ, ಕಾಮಗಾರಿ ನಡೆಸುವಾಗ ತಾರತಮ್ಯ ಮಾಡದೆ, ಅಗತ್ಯವಿರುವ ಕಡೆ ಪೈಪ್ ಲೈನ್ ಅಳವಡಿಸುವುದು ಸೇರಿದಂತೆ ಸಮರ್ಪಕ ನೀರು ಸರಬರಾಜಿಗೆ ಅಗತ್ಯಾನುಸಾರ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ರಮೇಶ್, ಉಪಾಧ್ಯಕ್ಷ ಶಿವಾನಂದ, ಪಿಡಿಒ ಕೆ.ವಿ.ಶಾರದಾ, ಸದಸ್ಯರಾದ ಆರ್.ಎ.ಉಮೇಶ್, ಎಂ.ಕೆ.ರವಿಪ್ರಸಾದ್, ಎಂ.ಜೆ.ಶ್ರೀನಿವಾಸ್, ಗೋಪಾಲ್, ಶೋಭಾ ಹರೀಶ್, ಭಾಗ್ಯಲಕ್ಷ್ಮಿ ಶಿವಕುಮಾರ್, ವಿನುತಾ ತಿರುಮಲೇಶ್, ಗುತ್ತಿಗೆದಾರ ಅಯ್ಯಣ್ಣಗೌಡ, ಎಂಜಿನಿಯರ್ ಪವನ್, ಎಸ್.ಎಫ್.ಸಿ.ಎಸ್.ನಿರ್ದೇಶಕ ಎ.ಬಿ.ನಾಗರಾಜ್, ಎಂ.ಪಿ.ಸಿ.ಎಸ್.ಅದ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಶ್ರೀನಿವಾಸ್ ರೆಡ್ಡಿ, ಮುಖಂಡರಾದ ಎಂ.ಶ್ರೀನಿವಾಸ್, ಗೋಪಾಲ್, ನಾರಾಯಣಸ್ವಾಮಿ, ರಮೇಶ್, ಹರೀಶ್, ಪ್ರಭಾಕರ್, ರೂಪೇಶ್, ಧರ್ಮೇಂದ್ರಕುಮಾರ್, ಸುದೀರ್, ಸುದರ್ಶನ್ ಹಾಜರಿದ್ದರು.