Sidlaghatta : ಜಾನುವಾರು ಗಣತಿಗೆ ಶಾಸಕ ಮೇಲೂರು ಬಿ.ಎನ್. ರವಿಕುಮಾರ್ ಗುರುವಾರ ಚಾಲನೆ ನೀಡಿದರು. ಗ್ರಾಮೀಣಾಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಲು ಅಂಕಿ ಅಂಶಗಳ ಸಂಗ್ರಹನೆಯು ಅತ್ಯಂತ ಮುಖ್ಯ ಎಂದು ಅವರು ಹೇಳಿದರು.
ಈ ಬಾರಿ 21ನೇ ಜಾನುವಾರು ಗಣತಿ ನಡೆಯುತ್ತಿದ್ದು, ಫೆಬ್ರವರಿವರೆಗೆ ಮುಂದುವರಿಯಲಿದೆ. ರೈತರು ಮತ್ತು ಸ್ಥಳೀಯರು ನಿಖರ ಮಾಹಿತಿಯನ್ನು ನೀಡಬೇಕು, ಮತ್ತು ಅಧಿಕಾರಿಗಳು ಸ್ಥಳಕ್ಕೆ ತೆರಳಿ ನೈಜ ಅಂಕಿ ಅಂಶಗಳನ್ನು ಸಂಗ್ರಹಿಸಬೇಕು ಎಂದು ಶಾಸಕರು ಮನವಿ ಮಾಡಿದರು.
ಮುಖ್ಯ ಪಶು ವೈದ್ಯಾಧಿಕಾರಿ ಡಾ. ಶ್ರೀನಾಥರೆಡ್ಡಿ ಅವರು, ಈ ವರ್ಷ ಅಂಕಿ ಅಂಶಗಳನ್ನು ಆಪ್ ಮೂಲಕ ಡಿಜಿಟಲ್ ಸ್ವರೂಪದಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ ಎಂದರು. ಗಣತಿಯಲ್ಲಿ ದನಕರು, ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಕೋಳಿ, ನಾಯಿಗಳ ಮಾಹಿತಿ ಸಂಗ್ರಹಿಸಲಾಗುವುದು.
ಅಧಿಕಾರಿಗಳು ಮತ್ತು 10 ಮಂದಿ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಇದು ಸರ್ಕಾರಿ ಯೋಜನೆಗಳ ರೂಪಣೆಗೆ ಸಹಾಯ ಮಾಡಲಿದೆ.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ, ಡಾ. ದೇವರಾಜ್, ಡಾ. ಅರುಣ್, ಮತ್ತು ಇತರರು ಹಾಜರಿದ್ದರು.