Kundalagurki, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ದೊಣಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಮೊದಲ ಅಂತಸ್ತು ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ.ಹಾ.ಮ ನಿರ್ದೇಶಕ ಆರ್. ಶ್ರೀನಿವಾಸ್ ನಾಮಫಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಾಲಿನ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿ ರೈತರದ್ದಾಗಿದೆ. ಹಾಲು ಉತ್ಪಾದಕರು ಡೈರಿಗಳಿಗೆ ಹಾಕುವ ಹಾಲಿನ ಗುಣಮಟ್ಟ ಉತ್ತಮವಾಗಿದ್ದಲ್ಲಿ, ಉತ್ಪಾದಕರಿಗೆ ಉತ್ತಮ ಬೆಲೆ ಸಿಗುತ್ತದೆ. ಸಂಘಟಿತ ಶಕ್ತಿಯಿಂದ ಸಹಕಾರ ಸಂಘವನ್ನು ಉತ್ತಮವಾಗಿ ಬೆಳೆಸಿ ಎಂದು ಹೇಳಿದರು.
ದೊಣಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಟೇಪ್ ಕತ್ತರಿಸುವ ಮೂಲಕ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಬಂಕ್ ಮುನಿಯಪ್ಪ ಉದ್ಘಾಟನೆ ನೆರವೇರಿಸಿ ಮಾತನಾಡಿ, ಪಕ್ಷಾತೀತವಾಗಿ ಸಹಕಾರ ಸಂಘವನ್ನು ಕಟ್ಟಿ ಬೆಳೆಸಬೇಕು ಹಾಲು ಉತ್ಪಾದಕರು ಒಂದೇ. ಸಂಘದಲ್ಲಿ ಜಾತಿ, ಧರ್ಮ, ರಾಜಕೀಯ ಪಕ್ಷ ನುಸುಳದಂತೆ ನೋಡಿಕೊಳ್ಳಿ. ರೈತರು ಹೈನುಗಾರಿಕೆಯಲ್ಲಿ ಯಶಸ್ಸನ್ನು ಕಾಣುವಂತಾಗಲಿ ಎಂದು ಹೇಳಿದರು.
ದೊಣಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ ಎನ್ ನಟರಾಜ್ ಮಾತನಾಡಿ, ಉತ್ತಮ ಗುಣಮಟ್ಟದ ಹಾಲು ಶೇಖರಣೆಯಾದಾಗ ಹಾಲಿಗೆ ಒಳ್ಳೆಯ ಬೆಲೆ ಸಿಗುತ್ತದೆ. ಆ ಮೂಲಕ ಸಹಕಾರ ಸಂಘವೂ ಉತ್ತಮವಾಗಿ ಅಭಿವೃದ್ಧಿಯಾಗುತ್ತದೆ ಮತ್ತು ಹಾಲು ಉತ್ಪಾದಕರಿಗೂ ಆರ್ಥಿಕವಾಗಿ ಸಹಾಯವಾಗುತ್ತದೆ. ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಉತ್ತಮವಾಗಿ ಆಡಳಿತ ನಡೆಸಿದರೆ ಸಂಘ ಅಭಿವೃದ್ಧಿಯಾಗುತ್ತದೆ ಎಂದರು.
ಮಾಜಿ ಎಂಪಿಸಿಎಸ್ ಅಧ್ಯಕ್ಷರುಗಳಾದ ಡಿ ಎ. ನಾರಾಯಣಸ್ವಾಮಿ, ಎಂ ವೆಂಕಟೇಶ್, ಎ.ಶ್ರೀನಿವಾಸ್, ಚಂದ್ರಶೇಖರ್, ದಾಸಚಾರಿ, ಶ್ರೀರಾಮಪ್ಪ, ವಿ. ನಾರಾಯಣಸ್ವಾಮಿ, ಹಿರಿಯರಾದ ರಾಮಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಡಿ.ಬಿ. ವೆಂಕಟರೆಡ್ಡಿ, ರತ್ನಮ್ಮ ವಿ.ನಾರಾಯಣಸ್ವಾಮಿ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೋಚಿಮುಲ್ ಉಪವ್ಯವಸ್ಥಾಪಕ ಬಿ.ಆರ್.ರವಿಕಿರಣ್, ವಿಸ್ತರಣಾಧಿಕಾರಿಗಳಾದ ವಿ. ಶ್ರೀನಿವಾಸ್, ಉಮೇಶ್ ರೆಡ್ಡಿ, ಹಾಗೂ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ ಶ್ರೀನಿವಾಸ್, ಕೃಷ್ಣಮೂರ್ತಿ, ರಾಮಚಂದ್ರ, ರಾಮ ಮೂರ್ತಿ, ನಾರಾಯಣ ಚಾರಿ, ಸೊಣ್ಣಪ್ಪ, ಕೃಷ್ಣಪ್ಪ, ಬಚ್ಚೇಗೌಡ, ಸರೋಜಮ್ಮ, ಪ್ರಮೀಳಮ್ಮ, ಕಾರ್ಯದರ್ಶಿ ಡಿ.ವಿ.ಆಂಜಿನಪ್ಪ, ಧನಂಜಯ, ದೇವರಾಜ್, ಹಾಗೂ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಮತ್ತು ದೊಣಹಳ್ಳಿ ಗ್ರಾಮಸ್ಥರು ಹಾಜರಿದ್ದರು.