
Sidlaghatta : ಶಿಡ್ಲಘಟ್ಟ ನಗರದ ಮುತ್ತೂರು ಬೀದಿಯ ಕರಗದಮ್ಮದೇವಿ ಹಸಿ ಕರಗ ಮಹೋತ್ಸವವು ಗುರುವಾರ ರಾತ್ರಿ ಭಕ್ತಿಭಾವ ಹಾಗೂ ವೈಭವದೊಂದಿಗೆ ನೆರವೇರಿತು.
ಕರಗ ಆಚರಣೆ ಯನ್ನು ಆದಿಶಕ್ತಿಯ ಆರಾಧನೆಯ ರೂಪವಾಗಿ ಪರಿಗಣಿಸಲಾಗುತ್ತದೆ. ಕರಗದಮ್ಮ ಎಂಬ ಹೆಸರಿನಲ್ಲಿ ಆಕೆಯನ್ನು ಸಂಭೋಧಿಸಲಾಗುತ್ತಿದ್ದು, ಕರ್ನಾಟಕ ಮತ್ತು ತಮಿಳುನಾಡು ಪ್ರದೇಶಗಳಲ್ಲಿ ಮಾತ್ರ ಈ ರೀತಿಯ ಶಕ್ತಿಪೂಜೆ ನಡೆಸುವ ಆಚರಣೆ ಪ್ರಚಲಿತದಲ್ಲಿದೆ.
ಮಣ್ಣಿನ ಮಡಿಕೆಗೆ ಜಲವನ್ನು ತುಂಬಿ, ಅದನ್ನು ಅರಿಶಿನ, ಕುಂಕುಮ ಹಾಗೂ ಮಲ್ಲಿಗೆ ಹೂಗಳಿಂದ ಶ್ರಂಗಾರಿಸಲಾಗುತ್ತದೆ. ಮಡಿಕೆಯ ಮೇಲೆ ಮಲ್ಲಿಗೆಯ ಹಾರಗಳಿಂದ ಗೋಪುರದ ರೂಪ ನೀಡಲಾಗುತ್ತದೆ. ಇದೇ ಹಸಿ ಕರಗ.
ಈ ವರ್ಷ ರಾಜೇಂದ್ರ ಅವರು ಕರಗವನ್ನು ಹೊತ್ತಿದ್ದರು. ವೀರಕುಮಾರರು ಕರಗದ ಮುಂದೆ ಶ್ರದ್ಧಾಭರಿತ ಅಲಗು ಸೇವೆ ಸಲ್ಲಿಸಿದರು. ಹಲಗೆ ಹಾಗೂ ತಮಟೆ ವಾದ್ಯಗಳ ಮೆರವಣಿಗೆಯೊಂದಿಗೆ ಕರಗವನ್ನು ದೇವಾಲಯದ ಸುತ್ತಲೂ ಭಕ್ತರ ಸಮ್ಮುಖದಲ್ಲಿ ನೃತ್ಯಭಾವದಿಂದ ಕೊಂಡೊಯ್ಯಲಾಯಿತು.