ಕನ್ನಡ ನಾಡು ನುಡಿ ಭಾಷೆಯನ್ನು ಸರಕಾರವೋ ಅಥವಾ ಇನ್ನಾರೋ ಉಳಿಸೊಲ್ಲ. ಕನ್ನಡಿಗರಾದ ನಾವು ನೀವೆ ಕನ್ನಡವನ್ನು ಮಾತನಾಡುವುದು ಬರೆಯುವ ಮೂಲಕ ಉಳಿಸಿ ಬೆಳೆಸಬೇಕಾಗಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಕನ್ನಡಾಂಬೆ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ರಾಜೇಂದ್ರ ಎಂ.ಗೌಡ ತಿಳಿಸಿದರು.
ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಅಖಿಲ ಕರ್ನಾಟಕ ರಾಜ್ಯ ಕನ್ನಡಾಂಬೆ ಹಿತರಕ್ಷಣಾ ವೇದಿಕೆಯ ಜಿಲ್ಲೆ ಹಾಗೂ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ನೇಮಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕನ್ನಡದ ಹೆಸರಲ್ಲಿ ನೂರಾರು ಸಂಘಟನೆಗಳು ಇವೆ. ಅವುಗಳಲ್ಲಿ ನಮ್ಮದೂ ಒಂದು ಸಂಘಟನೆಯಾಗದೆ ಪ್ರಾಮಾಣಿಕವಾಗಿ ಕನ್ನಡಕ್ಕಾಗಿ ಕಾತ್ಯನಿರ್ವಹಿಸುವ ಸಂಘ ನಮ್ಮದಾಗಲಿದೆ ಎಂದು ಹೇಳಿದರು.
ಯಾವುದೆ ಚುನಾವಣೆ ಸಮಯದಲ್ಲಿ ನಮ್ಮ ಸಂಘಟನೆಯ ಕಾರ್ಯಕರ್ತರು ಒಂದು ತಿಂಗಳ ಕಾಲ ನಮ್ಮ ಸಂಘಟನೆಯ ಗುರ್ತಿನ ಚೀಟಿಯನ್ನು ಮನೆಯಲ್ಲಿಟ್ಟು ಚುನಾವಣೆಯ ಪ್ರಕ್ರಿಯೆಗಳಲ್ಲಿ ಭಾಗವಹಿಸಲು, ಚುನಾವಣೆ ಮುಗಿದ ಮೇಲೆ ಕನ್ನಡಿಗನಾಗಬೇಕು.
ನಮ್ಮ ಸಂಘಟನೆಯ ಯಾವುದೆ ಒಬ್ಬ ಕಾರ್ಯಕರ್ತನೂ ಕೆಟ್ಟ ಹೆಸರನ್ನು ತೆಗೆದುಕೊಳ್ಳಲು ಅವಕಾಶವಿಲ್ಲ ಎಂದು ಸಂಘಟನೆಯ ಉದ್ದೇಶಗಳನ್ನು ವಿವರಿಸಿದರು.
ಸಂಘದ ರೈತ ಘಟಕದ ಜಿಲ್ಲಾಧ್ಯಕ್ಷನನ್ನಾಗಿ ವೈ.ಹುಣಸೇನಹಳ್ಳಿಯ ಮಂಜುನಾಥ್‍ರೆಡ್ಡಿ, ತಾಲೂಕು ಅಧ್ಯಕ್ಷರಾಗಿ ಬಸವರಾಜ್, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ಗಂಗರಾಜ್, ರೈತ ಘಟಕದ ತಾಲೂಕು ಅಧ್ಯಕ್ಷರಾಗಿ ಮುರಳಿಧರ್ ಅವರನ್ನು ಆಯ್ಕೆ ಮಾಡಲಾಯಿತು.