Home News ಸಮಾನತೆ ಸಿಗುವವರೆಗೆ ಹೋರಾಟ: ಸಚಿವ ಕೆ.ಎಚ್. ಮುನಿಯಪ್ಪ

ಸಮಾನತೆ ಸಿಗುವವರೆಗೆ ಹೋರಾಟ: ಸಚಿವ ಕೆ.ಎಚ್. ಮುನಿಯಪ್ಪ

0
Sidlaghatta H Cross Adi Jambava Seva Sangha Inauguration

H Cross, Sidlaghatta : “ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸೂಚಿಸಿದಂತೆ ಸಮಾನತೆ ಮತ್ತು ಸಹಬಾಳ್ವೆಯ ಜೀವನ ನಮ್ಮೆಲ್ಲರಿಗೂ ಸಿಗುವವರೆಗೂ ಹೋರಾಟವನ್ನು ನಿಲ್ಲಿಸಬಾರದು. ಈ ಹೋರಾಟ ಶಾಂತಿಯುತವಾಗಿರಬೇಕು” ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅಭಿಪ್ರಾಯಪಟ್ಟರು.

ತಾಲೂಕಿನ ಎಚ್. ಕ್ರಾಸ್‌ನ ಸಿಂಚನ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಕರ್ನಾಟಕ ಆದಿ ಜಾಂಬವ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಸಮಾನತೆ ಮತ್ತು ಸಹಬಾಳ್ವೆಯ ಜೀವನಕ್ಕಾಗಿ ಸಮಾಜದ ಎಲ್ಲರೂ ಶಿಕ್ಷಣವನ್ನು ಅಲಂಕರಿಸಬೇಕು. ಶೋಷಿತರ ಮಕ್ಕಳು ಉತ್ತಮ ಶಿಕ್ಷಣ ಪಡೆದು, ಸಮಾಜದ ಮುಖ್ಯವಾಹಿನಿಯಲ್ಲಿ ಸಾಗಲು ಅವಕಾಶವಿಲ್ಲದೆ ಬಡಾವಣೆ ಮತ್ತು ಶೋಷಿತ ಸ್ಥಿತಿಯಲ್ಲೇ ಉಳಿಯಬಾರದು. ಸರಕಾರವು ಮೊರಾಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಅಂಬೇಡ್ಕರ್ ಮತ್ತು ವಾಲ್ಮೀಕಿ ವಸತಿ ಶಾಲೆಗಳನ್ನು ಪ್ರಾರಂಭಿಸಿರುವುದು ಇದರಲ್ಲೊಂದು ದೊಡ್ಡ ಹೆಜ್ಜೆಯಾಗಿದೆ” ಎಂದರು.

“ಅಂಬೇಡ್ಕರ್ ಅವರ ದಾರಿ ನಮ್ಮೆಲ್ಲರಿಗಾಗಿ ದಿಕ್ಕುದೀಪವಾಗಿದೆ. ಅವರ ಸಂವಿಧಾನ ನಮಗೆ ಸಮಾನ ಹಕ್ಕು ಮತ್ತು ಸಹಬಾಳ್ವೆ ನೀಡಲು ಅನುವು ಮಾಡಿಕೊಟ್ಟಿದೆ. ಆದರೆ ಈ ಹೋರಾಟ ಯಾರ ವಿರುದ್ದವೂ ಅಲ್ಲ, ನಮ್ಮ ಹಕ್ಕುಗಳನ್ನು ಪಡೆಯಲು ಮತ್ತು ಸಮಾಜದಲ್ಲಿ ಸಮಾನತೆ ಸಾಧಿಸಲು ಕೇವಲ ಶಾಂತಿಯುತವಾದ ಹೋರಾಟವಾಗಿರಬೇಕು” ಎಂದು ಹೇಳಿದರು.

ಕಡಪದ ಆದಿ ಜಾಂಬವ ಮಠದ ಶ್ರೀ ಆನಂದಮುನಿಸ್ವಾಮೀಜಿ ಮಾತನಾಡಿ, “ಆದಿ ಜಾಂಬವನ ಶ್ರೀರಾಮನಿಂದ ಪೂಜಿಸಲ್ಪಟ್ಟ ಶ್ರೇಷ್ಠ ವ್ಯಕ್ತಿಯಾಗಿದ್ದನು. ನಾವು ಅವರ ಸಮುದಾಯದವರಾಗಿ ಶ್ರೇಷ್ಠ ಬದುಕು ರೂಪಿಸಬೇಕು, ನಮ್ಮ ಜೀವನವನ್ನು ಮಾದರಿಯಾಗಿ ರೂಪಿಸಬೇಕು. ವಾಲ್ಮೀಕಿಯ ರಾಮಾಯಣದಲ್ಲಿ ಉಲ್ಲೇಖಿತ ಆದಿ ಜಾಂಬವನ ಮಹತ್ವವನ್ನು ತಿಳಿಯಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು” ಎಂದರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಹೋರಾಟಗಾರ ಅಜ್ಜಪ್ಪ, ಡಿಕೆಡಿ ವಿಜೇತ ನೃತ್ಯಪಟು ಶಶಾಂಕ್, ಮತ್ತು ಬುರ್ರಕಥೆ ವಿದ್ವಾಂಸ ಕೈವಾರದ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.
ಜನಪದ ಗಾಯಕ ವೇಚಲ್ ಅರುಣ್ ತಂಡದಿಂದ ಜನಪದ ಗಾಯನ, ಸಚಿನ್ ಡ್ಯಾನ್ಸ್ ಸ್ಟುಡಿಯೋ ಮಕ್ಕಳು ಮತ್ತು ಎಚ್. ಕ್ರಾಸ್ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೋರಂಜನೆ ಒದಗಿಸಿವೆ.

ಆದಿ ಜಾಂಬವ ಸೇವಾ ಸಂಘದ ಅಧ್ಯಕ್ಷ ಕೆ.ಎಂ. ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್‌ಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಭೀಮೇಶ್, ದಸಂಸ ಮುಖಂಡ ಗಂಗಾಧರಪ್ಪ, ಮಾದಿಗ ದಂಡೋರದ ದೇವರಾಜ್, ಭಾರತೀಯ ಸೇವಾ ಸಮಿತಿಯ ಅಮರ್‌ನಾಥ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version