ಶಿಡ್ಲಘಟ್ಟ ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಗುರುಭವನದ ಪಾಯದ ಕಾಮಗಾರಿಗೆ ಚಾಲನೆ ನೀಡಿ, ಪೂಜೆ ಸಲ್ಲಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಶಾಸಕರ ಅನುದಾನದಿಂದ 25 ಲಕ್ಷ ರೂ ಮತ್ತು ಎಂ.ಎಲ್.ಸಿ ಗಳ ಅನುದಾನಗಳಿಂದ 25 ಲಕ್ಷ ಸೇರಿದಂತೆ ಒಟ್ಟು 50 ಲಕ್ಷ ರೂಗಳ ಅನುದಾನವನ್ನು ಗುರುಭವನಕ್ಕೆ ಕೊಡಿಸುವುದಾಗಿ ಅವರು ಭರವಸೆ ನೀಡಿದರು.
ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಅವರ 10 ಲಕ್ಷ ರೂ ಅನುದಾನದಲ್ಲಿ ಪಾಯದ ಕೆಲಸಕ್ಕೆ ಕಾರ್ಯಾದೇಶವಾಗಿದೆ. ಗುಣಮಟ್ಟವನ್ನು ಕಾಯ್ದುಕೊಂಡು ಶೀಘ್ರವಾಗಿ ಕೆಲಸವನ್ನು ಮಾಡಬೇಕು. ಶಿಕ್ಷಕರ ಕ್ಷೇಮಾಭಿವೃದ್ಧಿಗೆ ಗುರುಭವನ ನಾಂದಿಯಾಗಲಿ ಎಂದು ಹೇಳಿದರು.
ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ.ಮುನಿರಾಜು, ಕಾರ್ಯದರ್ಶಿ ಬಿ.ಆರ್.ನಾರಾಯಣಸ್ವಾಮಿ, ಎನ್.ಪಿ.ಎಸ್.ಅಧ್ಯಕ್ಷ ವಿ.ಎನ್.ಗಜೇಂದ್ರ, ಸುದರ್ಶನ್, ಅರುಣ, ಸರಸ್ವತಮ್ಮ, ಸಾಧಿಕ್ ಪಾಷ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಎಲ್.ವಿ.ವೆಂಕಟರೆಡ್ಡಿ, ಸಿ.ಬಿ.ಪ್ರಕಾಶ್ ಹಾಜರಿದ್ದರು.