
Sidlaghatta : “ಯಾವುದೇ ಸಾಂಕ್ರಾಮಿಕ ಅಥವಾ ಅಸಂಕ್ರಾಮಿಕ ರೋಗವೊಂದರ ವಿರುದ್ಧ ಕೂಡ ಜನರು ಎಚ್ಚರಿಕೆಯಿಂದಿದ್ದು, ಆರೋಗ್ಯದ ಬಗ್ಗೆ ವೈಯಕ್ತಿಕ ಮಟ್ಟದಲ್ಲಿ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ,” ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮನೋಹರ್ ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶುಕ್ರವಾರ ನಡೆದ ವಿಶ್ವ ಮಲೇರಿಯಾ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಮಲೇರಿಯಾ ರೋಗದ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸಹಭಾಗಿತ್ವ ವಹಿಸಬೇಕು. ಆರೋಗ್ಯದ ಬಗ್ಗೆ ಸರಿಯಾದ ಅರಿವಿರುವುದು ರೋಗ ನಿಯಂತ್ರಣಕ್ಕೆ ಬಹುಮುಖ್ಯ. ಮಲೇರಿಯಾ ನಿಯಂತ್ರಣಕ್ಕಾಗಿ ಪರಿಸರ ಸ್ವಚ್ಛತೆ, ನಿಂತ ನೀರಿನ ತಡೆ ಮತ್ತು ಸೊಳ್ಳೆಗಳ ನಿಯಂತ್ರಣ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು,” ಎಂದರು.
ಡಾ. ವಿಜಯಕುಮಾರ್, ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಎಂ.ಎಸ್. ನಂದಿನಿ, ವಿಜಯಮ್ಮ, ಗೀತಾ, ಸುನಿಲ್ ಕುಮಾರ್, ಧನಂಜಯ್, ಅಪ್ರೋಜ್ ಹಾಗೂ ಹಲವಾರು ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.