Home News Government Hospital ನಲ್ಲಿ ವಿಕಲಚೇತನರ ಪ್ರಮಾಣ ಪತ್ರಕ್ಕಾಗಿ ಅಂಗವಿಕಲರ ಪರದಾಟ

Government Hospital ನಲ್ಲಿ ವಿಕಲಚೇತನರ ಪ್ರಮಾಣ ಪತ್ರಕ್ಕಾಗಿ ಅಂಗವಿಕಲರ ಪರದಾಟ

0
Sidlaghatta Government Hospital UDID

Sidlaghatta : ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ (Government Hospital) ವಿಕಲಚೇತನ ಪ್ರಮಾಣ ಪತ್ರಕ್ಕಾಗಿ (Unique Disability ID – UDID) ಆಗಮಿಸಿದ್ದ ಹತ್ತಾರು ಅಂಗವಿಕಲರು ಪ್ರಮಾಣ ಪತ್ರಕ್ಕಾಗಿ ಗಂಟೆಗಟ್ಟಲೆ ಕಾಯುವಂತಾಯಿತು. ವಿಕಲಾಂಗತೆಯ ಪ್ರಮಾಣವನ್ನು ಪರೀಕ್ಷಿಸಿ ವೈದ್ಯರು ಸಹಿ ಹಾಕಿದರೂ ಸಂಬಂಧಿಸಿದ ಗುಮಾಸ್ತ ಇಲ್ಲದ ಕಾರಣ ಪ್ರಮಾಣ ಪತ್ರ ಸಿಗದೆ ಕಾಯುವಂತಾಯಿತು. ವಿಷಯ ತಿಳಿದ ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಿಕಲಾಂಗತೆಯ ಪ್ರಮಾಣ ಪತ್ರ ನೀಡಲು ಖಾಯಂ ಆಗಿ ಸಿಬ್ಬಂದಿಯನ್ನು ನಿಯೋಜಿಸಿ ಕೊನೆಗೂ ಸಮಸ್ಯೆ ಬಗೆಹರಿಸಿದರು.

ಜಿಲ್ಲೆಯ ಎಲ್ಲ ತಾಲ್ಲೂಕುಗಳ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರ ವಿಕಲಾಂಗತೆಯ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು ಅದರಂತೆ ಹತ್ತಾರು ಮಂದಿ ಅಂಗವಿಕಲರು ಪ್ರಮಾಣ ಪತ್ರ ಪಡೆಯಲೆಂದು ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಗೂ ಬಂದಿದ್ದರು.

ಕಿವಿ ಮೂಗು ಗಂಟಲು, ಮೂಳೆ ಇನ್ನಿತರೆ ವೈದ್ಯರು ತಮಗೆ ಸಂಬಂಧಿಸಿದಂತೆ ತಪಾಸಣೆ ನಡೆಸಿ ಪ್ರಮಾಣ ಪತ್ರ ನೀಡುವುದಕ್ಕೂ ಮೊದಲು ಅಗತ್ಯವಾದ ನಮೂನೆಯನ್ನು ನೀಡಿದ್ದಾರೆ. ಆದರೆ ಅದನ್ನು ಕಂಪ್ಯೂಟರ್‌ನಲ್ಲಿ ನಮೂದಿಸಿ ಅರ್ಜಿ ಫಾರಂಗಳನ್ನು ನೀಡಬೇಕಾದ ಸಿಬ್ಬಂದಿ ಬೇರೊಂದು ವಿಭಾಗದ ಕೆಲಸದಲ್ಲಿ ನಿರತರಾಗಿದ್ದರು.

ಇತ್ತ ವೈದ್ಯರು ತಮ್ಮ ಕೆಲಸ ಮುಗಿಸಿ ಮದ್ಯಾಹ್ನದ ಊಟಕ್ಕೆ ಹೊರಟರಾದರೂ ಆ ಗುಮಾಸ್ತ ಮಾತ್ರ ಬರಲಿಲ್ಲ. ಇದರಿಂದ ಪ್ರಮಾಣ ಪತ್ರಕ್ಕಾಗಿ ಕಾದ ಅಂಗವಿಕಲರು ಗಂಟೆಗಟ್ಟಲೆ ಕಾಯುವಂತಾಯಿತು. ಇದೇ ವೇಳೆ ಆಸ್ಪತ್ರೆಗೆ ತೆರಳಿದ ಪತ್ರಕರ್ತರ ಬಳಿ ವಿಕಲಚೇತನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಪ್ರತಿ ಮಂಗಳವಾರ ಎಲ್ಲ ವಿಭಾಗದ ವೈದ್ಯರು ಇರಬೇಕು, ಒಬ್ಬರು ಇದ್ದರೆ ಇನ್ನೊಬ್ಬರು ಇರಲಿಲ್ಲ. ಎಲ್ಲ ವೈದ್ಯರು ಇರುವ ಸಮಯದಲ್ಲಿ ಸಂಬಂಧಿಸಿದ ಕಂಪ್ಯೂಟರ್ ಆಪರೇಟರ್ ಇರುವುದಿಲ್ಲ. ಇದರಿಂದ ನಮಗೆ ಸಕಾಲಕ್ಕೆ ವಿಕಲಚೇತನರ ಪ್ರಮಾಣ ಪತ್ರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಷಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಾಣಿ, ತಜ್ಞ ವೈಧ್ಯ ಮಂಜುನಾಥ್ ನಾಯಕ್ ಅವರಿಗೆ ತಿಳಿದು ಅವರು ಸ್ಥಳಕ್ಕೆ ಬಂದು ಕಂಪ್ಯೂಟರ್ ಆಪರೇಟರ್‌ನ್ನು ತರಾಟೆಗೆ ತೆಗೆದುಕೊಂಡರು.

ಪ್ರತಿ ಮಂಗಳವಾರ ವಿಕಲಚೇತನರ ಪ್ರಮಾಣ ಪತ್ರ ವಿತರಿಸುವ ವಿಭಾಗ ಬಿಟ್ಟು ಬೇರೆ ಕಡೆ ಹೋಗದಂತೆ ಎಚ್ಚರಿಸಿದರಲ್ಲದೆ ಅವರಲ್ಲದೆ ಇನ್ನೊಬ್ಬ ಸಿಬ್ಬಂದಿಯನ್ನು ಸಹ ಈ ವಿಭಾಗದಲ್ಲೆ ಪ್ರತಿ ಮಂಗಳವಾರ ಕಾರ್ಯನಿರ್ವಹಿಸುವಂತೆ ಸೂಚಿಸಿ ಮುಂದೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿ ಸಮಸ್ಯೆಗೆ ಪರಿಹಾರ ಒದಗಿಸಿದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version