Sidlaghatta : ಜಂಗಮಕೋಟೆ ಕ್ರಾಸ್‌ನ ಜ್ಞಾನ ಜ್ಯೋತಿ ಶಾಲೆಯ (Gnana Jyothi School) ವಿದ್ಯಾರ್ಥಿಗಳು ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಗಳಿಸಿ, ದಕ್ಷಿಣ ಭಾರತ ವಲಯ ಮಟ್ಟಕ್ಕೆ ಆಯ್ಕೆಯಾಗಿ ಸನ್ಮಾನಿತರಾಗಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ ಜೆ.ಎಸ್.ಪೂರ್ವಿಕ “ಅಟ್ಮಾಸ್ಫಿಯರ್ ವಾಟರ್ ಎಕ್ಸ್ಟ್ರಾಕ್ಷನ್ ಸಿಸ್ಟಂ” ಕುರಿತು ಪ್ರಸ್ತುತಪಡಿಸಿ ಪ್ರಥಮ ಸ್ಥಾನ ಪಡೆದರೆ, ಗುಂಪು ವಿಭಾಗದಲ್ಲಿ ಸಾರಿಕಾ ಮತ್ತು ನಂದನ್‌ಕುಮಾರ್ “ಬ್ರಿಡ್ಜ್ ಸೇಫ್ ಫ್ಲಡ್ ಅಲರ್ಟ್ ಸಿಸ್ಟಂ” ಅನ್ನು ಪ್ರಸ್ತುತಪಡಿಸಿ ಪ್ರಥಮ ಸ್ಥಾನ ಗಳಿಸಿದರು.
ಜನವರಿ 3ನೇ ವಾರದಲ್ಲಿ ಪಾಂಡಿಚೇರಿಯಲ್ಲಿ ನಡೆಯಲಿರುವ ದಕ್ಷಿಣ ಭಾರತ ವಲಯ ಮಟ್ಟದ ಸ್ಪರ್ಧೆಗೆ ಈ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ವಿ.ಪ್ರಸಾದ್ ಮತ್ತು ಸುದರ್ಶನ್ ಶಿಕ್ಷಕರನ್ನು ಹಾಗೂ ವಿಜೇತ ವಿದ್ಯಾರ್ಥಿಗಳನ್ನು ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ರಾಜೀವ್ ಕುಮಾರ್ ಮತ್ತು ಪ್ರಿನ್ಸಿಪಾಲ್ ಪಿ.ಮನುಶ್ರೀ ಅವರು ಸನ್ಮಾನಿಸಿದರು.