Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ರೈತರಿಗಾಗಿ ಮಾಹಿತಿ ಕೇಂದ್ರವನ್ನು ಗ್ರಾಮದ ಸಮುದಾಯ ಭವನದಲ್ಲಿ ತೆರೆದಿದ್ದರು.
ವಿವಿಧ ಕೃಷಿ ವಿಭಾಗಗಳಾದ ಕೃಷಿ ವಿಸ್ತರಣೆ, ಮಣ್ಣು ವಿಜ್ಞಾನ, ಅನುವಂಶಿಕತೆ, ಅಣಬೆ ಬೇಸಾಯ, ಅಜೋಲಾ, ಬೇಸಾಯ ಶಾಸ್ತ್ರ, ಕೀಟಶಾಸ್ತ್ರ, ಹೈನುಗಾರಿಕೆ, ಆಹಾರ ವಿಜ್ಞಾನ, ರೋಗ ಶಾಸ್ತ್ರ, ಅರ್ಥಶಾಸ್ತ್ರ, ರೇಷ್ಮೆ ಕೃಷಿ, ಜೈವಿಕ ಇಂಧನ ವಿಷಯಗಳ ಕುರಿತಾಗಿ ಮಾಹಿತಿ, ಪ್ರಾತ್ಯಕ್ಷಿಕೆ, ಮಾದರಿಗಳ ಮೂಲಕ ಗ್ರಾಮಸ್ಥರಿಗೆ ವಿದ್ಯಾರ್ಥಿಗಳು ವಿವರಿಸಿದರು.
ಈ ಸಂದರ್ಭದಲ್ಲಿ ಮಣ್ಣು ಪರೀಕ್ಷೆಯ ಪ್ರಮಾಣಪತ್ರವನ್ನು ರೈತರಿಗೆ ವಿತರಿಸಿದ ರೇಷ್ಮೆ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಪಿ.ವೆಂಕಟರಾಮನ್ ಮಾತನಾಡಿ, “ಕೃಷಿ ಕ್ಷೇತ್ರದಲ್ಲಿ ನಡೆದಿರುವ ವೈಜ್ಞಾನಿಕ ಸಂಶೋಧನೆಗಳು, ತಾಂತ್ರಿಕತೆ ಪ್ರತಿಯೊಬ್ಬ ರೈತರಿಗೂ ತಿಳಿಯಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳು ಮಾಹಿತಿ ಕೇಂದ್ರವನ್ನು ತೆರೆದಿದ್ದು, ಅದರ ಸದುಪಯೋಗ ಮಾಡಿಕೊಳ್ಳಿ” ಎಂದು ತಿಳಿಸಿದರು.
ರೇಷ್ಮೆ ಕೃಷಿ ಪ್ರಾಧ್ಯಾಪಕರಾದ ಡಾ.ರಾಮಕೃಷ್ಣ ನಾಯಕ್, ಪ್ರಾಧ್ಯಾಪಕರಾದ ಡಾ.ಶ್ರೀನಿವಾಸರೆಡ್ಡಿ, ಡಾ.ವಿ.ಪಿ.ಭಾರತಿ, ಡಾ.ಮಂಜುನಾಥ, ಡಾ.ಪಲ್ಲವಿ, ಡಾ.ಮಮತಾ, ದೇವರಮಳ್ಳೂರು ಗ್ರಾಮದ ರೆಡ್ಡಿಸ್ವಾಮಿ, ರಾಕೇಶ, ವೆಂಕೋಬರಾವ್, ಅಕ್ಕಲಪ್ಪ, ಶ್ರೀರಾಮ, ರೇಷ್ಮೆ ಕೃಷಿ ವಿದ್ಯಾರ್ಥಿಗಳಾದ ಅಭಿಲಾಷ, ಅಜಯ್, ಅಂಕಿತ್, ನಿತಿನ್, ಚಲಪತಿ, ಚಂದು, ಗೋದಾವರಿ, ಗೌರವ್, ಬಿಂದು, ಕಾಂಚನ, ಕಾವ್ಯಶ್ರೀ, ಲಾವಣ್ಯ, ಆರ್.ಲಿಖಿತ್ ಕುಮಾರ್, ಮೇಘನಾ, ಮೋನಿಕಾ, ನವ್ಯಶ್ರೀ ಹಾಜರಿದ್ದರು.