Dibburahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ವೈದ್ಯ ಎಂದು ಹೇಳಿಕೊಂಡು ನಾಮ ಫಲಕವಿಲ್ಲದ ಅಂಗಡಿಯಲ್ಲಿ ಸಾರ್ವಜನಿಕರಿಗೆ ಮಾತ್ರೆ, ಚುಚ್ಚು ಮದ್ದು ನೀಡುತ್ತಿದ್ದ ವೆಂಕಟಪ್ಪ ಎಂಬುವವರ ಅಂಗಡಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮುಚ್ಚಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮತ್ತು ಆರೋಗ್ಯ ನಿರೀಕ್ಷಕ ದೇವರಾಜ್ ಇಬ್ಬರೂ ಆ ಅಂಗಡಿ ಮೇಲೆ ದಾಳಿ ಮಾಡಿದ್ದಾಗ ಸುಮಾರು 20 ಜನ ಚಿಕಿತ್ಸೆಗೆಂದು ಬಂದಿದ್ದರು. ಎಚ್ಚರಿಕೆ ನೀಡಿ ಆ ಕ್ಲಿನಿಕ್ ಹೆಸರಿನ ಅಂಗಡಿ ಬಂದ್ ಮಾಡಿಸಲಾಯಿತು.
ವೆಂಕಟಪ್ಪ ಅವರು ಈ ಹಿಂದೆ ಸಾದಲಿ ಸರ್ಕಾರಿ ಅಸ್ಪತ್ರೆಯಲ್ಲಿ ಗ್ರೂಪ್ ಡಿ ನೌಕರನಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಯಶ್ವಂತ ಪ್ರಸಾದ್ ಇದ್ದರು.