ಶಿಡ್ಲಘಟ್ಟ ತಾಲ್ಲೂಕಿನ ಕಾಚಹಳ್ಳಿ ಗ್ರಾಮದ ಮದ್ದೂರಮ್ಮ ದೇವಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಕೃಪಾಪೋಷಿತ ನಾಟಕ ಮಂಡಳಿ ಸಹಯೋಗದಲ್ಲಿ ಮಂಗಳವಾರ “ಶ್ರೀಕೃಷ್ಣ ರಾಯಭಾರ ಹಾಗೂ ಕುರುಕ್ಷೇತ್ರ” ಪೌರಾಣಿಕ ನಾಟಕಗಳ ಪ್ರದರ್ಶನ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಮದ್ದೂರಮ್ಮ ದೇವಾಲಯದ ಅರ್ಚಕ ರಾಮಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.
ಪ್ರದರ್ಶನದ ನಂತರ ಮಾತನಾಡಿದ ನಾಟಕ ನಿರ್ದೇಶಕ ಎಂ.ಶಿವಣ್ಣ ಅವರು ಟಿ.ವಿ. ಮಾಧ್ಯಮಗಳ ಹೊಡೆತಕ್ಕೆ ಸಿಲುಕಿ ನಲುಗಿರುವ ನಾಟಕ ಕಲೆ ಇಂದಿಗೂ ಜೀವಂತವಾಗಿದೆ ಎಂದರೆ, ಇದಕ್ಕೆ ಗ್ರಾಮೀಣ ಪ್ರದೇಶದ ಜನರ ಪ್ರೋತ್ಸಾಹ ಹಾಗೂ ಆಸಕ್ತಿಯೇ ಕಾರಣ ಎಂದು ಅಭಿಪ್ರಾಯಪಟ್ಟರು.
ಈ ದಿಸೆಯಲ್ಲಿ ನಾಟಕ ಕಲೆಯನ್ನು ಉಳಿಸಿ, ಬೆಳೆಸಲು, ಕನ್ನಡ ಮತ್ತು ಸಂಸ್ಕೃತಿ, ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ನಾಟಕ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ನಾಟಕದ ಪಾತ್ರಧಾರಿಗಳಾಗಿ ಗಂಗಾಧರ, ಪ್ರವೀಣ, ಶ್ರೀಧರ್, ಅಖಿಲೇಶ್, ದ್ಯಾವಪ್ಪ, ಚರಣ್, ರವಿಕುಮಾರ್, ನರಸಿಂಹಮೂರ್ತಿ, ತಿಪ್ಪಣ್ಣ, ಮಂಜುಶ್ರೀ, ಕನಕ ಅಭಿನಯಿಸಿದರು. ವಾದ್ಯಗೋಷ್ಠಿಯಲ್ಲಿ ಶಿವಣ್ಣ, ಮನೋಹರ, ಶ್ರೀನಿವಾಸಮೂರ್ತಿ, ತಮ್ಮಣ್ಣ ಭಾಗವಹಿಸಿದ್ದರು.
ಗ್ರಾಮದ ಮುಖಂಡರಾದ ಕೆ.ಎಂ.ಮುನಿಕೃಷ್ಣಪ್ಪ, ನಲ್ಲಪ್ಪ, ಮುನಿರಾಜು, ಮುನಿಯಪ್ಪ, ಕೆ.ಎನ್.ನರಸಿಂಹಮೂರ್ತಿ ಹಾಜರಿದ್ದರು.