Home News ಡಾಲ್ಫಿನ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ

ಡಾಲ್ಫಿನ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ

0
Sidlaghatta Dolphin's School Kannada Rajyotsava Childrens day

Sidlaghatta : ಶಿಡ್ಲಘಟ್ಟ ನಗರದ ಡಾಲ್ಫಿನ್ ಪಬ್ಲಿಕ್ ಶಾಲೆಯಲ್ಲಿ (CBSE) 69ನೇ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಎ. ನಾಗರಾಜ್ ಅವರು, “ಮಾತೃಭಾಷೆ ಮನೆಯಿಂದಲೇ ಬೆಳೆಸಿಕೊಳ್ಳುವ ಸುವಾಸನೆಯ ಭಾಷೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಕನ್ನಡ ದೀಪವನ್ನು ಮನೆಯಲ್ಲಿ ಹಚ್ಚುವ ಮೂಲಕ ಕನ್ನಡ ಭಾಷೆಯ ಪ್ರೀತಿ ವಿದ್ಯಾರ್ಥಿಗಳಲ್ಲಿ ಬೆಳೆಸುವ ಕೆಲಸ ಶಿಕ್ಷಕರದು” ಎಂದು ತಮ್ಮ ಸಂದೇಶದಲ್ಲಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಂಶುಪಾಲ ಎಲ್. ಮುನಿಕೃಷ್ಣಪ್ಪ, “ಮಕ್ಕಳಲ್ಲಿ ಕನ್ನಡದ ಪ್ರೀತಿಯನ್ನು ಬೆಳೆಸಲು ದಿನಪತ್ರಿಕೆ ಓದು, ಕಥೆ-ಕವನ ಸ್ಪರ್ಧೆ ಮತ್ತು ಸಾಹಿತ್ಯ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದರಿಂದ ಕನ್ನಡ ಸಾಹಿತ್ಯದ ವೈಶಿಷ್ಟತೆಯನ್ನು ಪರಿಚಯಿಸಬಹುದು” ಎಂದು ತಿಳಿಸಿದರು.

ಮುಖ್ಯ ಭಾಷಣಕಾರ ಎನ್. ನಾಗೇಶಯ್ಯ, “ಮಕ್ಕಳಲ್ಲಿ ಸಾಹಿತ್ಯದ ಮೆಚ್ಚುಗೆ ಬೆಳೆಯಲು ಕನ್ನಡದ ಸಮೃದ್ಧ ಸಾಹಿತ್ಯವನ್ನು ಪರಿಚಯಿಸಬೇಕು. ಸಾಹಿತ್ಯ ಕ್ಷೇತ್ರದ ಮಹತ್ವವನ್ನು ಮಕ್ಕಳಲ್ಲಿ ಅರಿವು ಮೂಡಿಸುವುದು ಮುಖ್ಯ” ಎಂದು ಹೊಂದಿಸಿದರು.

ಮುಖ್ಯ ಅತಿಥಿ ಎನ್. ಅಶೋಕ್, “ಕಲಿಯಲು ಸಾವಿರ ಭಾಷೆಗಳಿದ್ದರೂ ಮಾತನಾಡಲು ಒಂದು ಭಾಷೆ ಕನ್ನಡವೇ ಸಮೃದ್ಧ ಭಾಷೆ. ಸಣ್ಣ ಕಥೆಗಳು ಮತ್ತು ಸಂಭಾಷಣೆಗಳ ಮೂಲಕ ಮಕ್ಕಳಲ್ಲಿ ನಾಡಿನ ಪ್ರೀತಿ ಮತ್ತು ಸಾಹಿತ್ಯದ ಮೆಚ್ಚುಗೆ ಬೆಳೆಸಬಹುದು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಬಿ.ಎಸ್. ಚಂದನ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನೂರ್ ಜಾನ್ ಬೇಗಂ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸುದರ್ಶನ್, KSEAB ಪ್ರಾಂಶುಪಾಲ ಆರಿಫ್ ಅಹಮದ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡರು.

ಕಾರ್ಯಕ್ರಮದ ನಿರೂಪಣೆಯನ್ನು ಎನ್. ರಾಮಾಂಜಿ ನಡೆಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕನ್ನಡ ಸಂಘದ ಶಿಕ್ಷಕರು, ದೈಹಿಕ ಶಿಕ್ಷಕರಾದ ಭರತ್ ಹಾಗೂ ಸಿಬ್ಬಂದಿವರ್ಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version