Seegehalli, Sidlaghatta: ಶಿಡ್ಲಘಟ್ಟ ತಾಲ್ಲೂಕಿನ ಶೀಗೆಹಳ್ಳಿಯಲ್ಲಿ ಭಾನುವಾರ ಜಮೀನಿನಲ್ಲಿ ಹುಲ್ಲು ಮೇಯಲು ಹೋಗಿದ್ದ ಸೀಮೆ ಹಸು ಪಾಳು ಬಾವಿಗೆ ಜಾರಿ ಬಿದ್ದಿದ್ದನ್ನು ಗಮನಿಸಿದ ಗ್ರಾಮಸ್ಥರು ರಕ್ಷಿಸಿದ್ದಾರೆ (Cow Rescue).
ರೈತನಿಗೆ ಸೇರಿದ ಸೀಮೆ ಹಸುವೊಂದು ಹುಲ್ಲು ಮೇಯುತ್ತಾ ಆಕಸ್ಮಿಕವಾಗಿ ಶೀಗೆಹಳ್ಳಿ ಗ್ರಾಮದಿಂದ ಕೊತ್ತನೂರು ರಸ್ತೆಗೆ ಹೋಗುವ ದಾರಿಯಲ್ಲಿ 20 ಅಡಿ ಆಳವಿರುವ 10 ಅಡಿ ವೃತ್ತಾಕಾರದ ಪಾಳು ಬಾವಿಗೆ ಬಿದ್ದಿದೆ. ಎಚ್ಚೆತ್ತು ಕಾರ್ಯಪ್ರವೃತ್ತರಾದ ಹಸುವಿನ ಮಾಲೀಕರು ಗ್ರಾಮಸ್ಥರ ಸಹಾಯ ಪಡೆದು ಕ್ರೇನ್ ಮೂಲಕ ಸುರಕ್ಷಿತವಾಗಿ ಪ್ರಾಣಪಾಯವಿಲ್ಲದೆ ಹಸುವನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.