
Sidlaghatta : ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಜಗತ್ತಿನ ಎಲ್ಲಾ ದೇಶಗಳು, ಜಾತಿ, ಧರ್ಮ, ಭಾಷೆಗಳ ಭೇದವಿಲ್ಲದೆ ಖಂಡಿಸಬೇಕಿದೆ ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಗುಂಡಿಕ್ಕಿ ಕೊಂದಿರುವುದು ಕೇವಲ ಉಗ್ರ ಕೃತ್ಯವಲ್ಲ, ಬದಲಿಗೆ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆದ ಬರ್ಬರ ಕೃತ್ಯವಾಗಿದೆ” ಎಂದು ಖಂಡಿಸಿದರು.
“ಇಂತಹ ಸಂದರ್ಭಗಳಲ್ಲಿ ನಾವು ರಾಜಕೀಯ ಮಾಡುವ ಬದಲು ಉಗ್ರತೆಯನ್ನು ಖಂಡಿಸುವುದು ಮುಖ್ಯ. ಉಗ್ರರ ಬೇರು ಸಮೇತ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರಕ್ಕೆ ಎಲ್ಲರೂ ನೈತಿಕ ಬೆಂಬಲ ನೀಡಬೇಕು. ಇದು ದೇಶದ ಭದ್ರತೆಗೆ ಬಹಳ ಅಗತ್ಯವಾಗಿದೆ” ಎಂದರು.
ಈ ಘಟನೆಗೆ ಭದ್ರತಾ ವೈಫಲ್ಯ ಮತ್ತಿತರ ಕಾರಣಗಳಿರಬಹುದಾದರೂ, ಈ ಸಂದರ್ಭದಲ್ಲಿ ಕಾರಣವಿಚಾರ ಮಾಡುವುದಕ್ಕಿಂತ ಉಗ್ರರ ವಿರುದ್ಧ ಒಗ್ಗಟ್ಟಾಗಿ ಹೋರಡುವುದು ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟರು.
“ಇಂದಿನ ಸ್ಥಿತಿಯಲ್ಲಿ ದೇಶದ ಭದ್ರತೆ, ಐಕ್ಯತೆ ಮತ್ತು ಭಾರತೀಯರ ಭವಿಷ್ಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರಧಾನಿ ನರೇಂದ್ರ ಮೋದಿಯವರು ಇಂತಹ ಭಯಾನಕ ಪರಿಸ್ಥಿತಿಯನ್ನು ಹತ್ತಿಕ್ಕಲು ಶಕ್ತಿ, ಧೈರ್ಯ ಮತ್ತು ದೂರದೃಷ್ಟಿಯುಳ್ಳವರಾಗಿದ್ದಾರೆ. ಉಗ್ರರ ಆಸ್ತಿತ್ವವನ್ನೇ ದೇಶದಿಂದ ಬೇರುಸಮೇತ ಕಿತ್ತು ಹಾಕಿ ಭಾರತವನ್ನು ವಿಶ್ವಗುರುವಾಗಿ ಸ್ಥಾಪಿಸಬೇಕೆಂದು” ಅವರು ಆಗ್ರಹಿಸಿದರು.