Bashettahalli, sidlaghatta : ಎಲ್ಲಾ ಯುವಕರನ್ನು ಒಗ್ಗೂಡಿಸುವ ಮೂಲಕ ಕೀಡಾಮನೋಭಾವದಿಂದ ಸಾಮರಸ್ಯದಿಂದ ತುಂಬಾ ಅಚ್ಚುಕಟ್ಟಾಗಿ ಕ್ರಿಕೆಟ್ ಪಂದ್ಯಗಳನ್ನು ನಡೆಸಬೇಕು ಎಂದು ಮಾಜಿ ಮಂಡಲ್ ಪಂಚಾಯಿತಿ ಅಧ್ಯಕ್ಷ ಟಿ.ವಿ ಶ್ರೀನಿವಾಸರೆಡ್ಡಿ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ಚಿಕ್ಕತೇಕಹಳ್ಳಿ ಗ್ರಾಮದಲ್ಲಿ ಫ್ರೆಂಡ್ಸ್ ಕ್ರಿಕೆಟ್ ತಂಡದ ವತಿಯಿಂದ ಶನಿವಾರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ನೇಹ ಭಾವದಿಂದ ಕ್ರಿಕೆಟ್ ಟೂರ್ನಿ ನಡೆಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಊರಿನ ಎಲ್ಲಾ ಯುವಕರು ಯಾವುದೇ ರೀತಿಯ ಗಲಭೆಗಳಿಗೆ ಅವಕಾಶ ನೀಡದೇ ವ್ಯವಸ್ಥಾಪಕರು ನೀಡುವ ತೀರ್ಮಾನಗಳಿಗೆ ಬದ್ಧರಾಗಿ ಟೂರ್ನಿಯನ್ನು ಉತ್ತಮವಾಗಿ ನಡೆಸಿಕೊಂಡು ಹೋಗಿ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ಸಿ. ವೆಂಕಟೇಶಪ್ಪ ಮಾತನಾಡಿ, ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸಬೇಕು. ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢವಾಗಿರುತ್ತದೆ. ಆಟಗಾರರು ಸೋಲು – ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಯುವಕರು ದೇಶದ ನಿಜವಾದ ಸಂಪತ್ತು. ನಿತ್ಯ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥೈರ್ಯ ಹೆಚ್ಚುತ್ತದೆ ಎಂದರು.
ಗ್ರಾಮದ ಮುಖಂಡರಾದ ಸೀತಾರಾಮಪ್ಪ, ಕೆ.ಮಂಜುನಾಥ್, ಪಿ.ಮಂಜುನಾಥ್, ಇ.ಮಂಜುನಾಥ್, ಟಿ.ಎಸ್. ಪ್ರದೀಪ್ ಕುಮಾರ್, ಕೃಷ್ಣಪ್ಪ ಆರ್, ಸೀತಪ್ಪ, ರವಿ ಸಿ.ಎನ್, ನಾಗೇಶ್, ಡಿ. ಶಿವಕುಮಾರ್, ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ತಂಡದ ಎಲ್ಲಾ ಆಟಗಾರರು, ಗ್ರಾಮಸ್ಥರು ಹಾಗೂ ಇತರೆ ಕ್ರೀಡಾಭಿಮಾನಿಗಳು ಹಾಜರಿದ್ದರು.