Basavapatna, Sidlaghatta : ಶಿಡ್ಲಘಟ್ಟ ತಾಲ್ಲೂಕಿನ, ಬಸವಪಟ್ಟಣ ಗ್ರಾಮದಲ್ಲಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಚಿಂತಾಮಣಿಯ ಕುರುಬೂರಿನ ರೇಷ್ಮೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು, ಗ್ರಾಮೀಣ ಕೃಷಿ ಅನುಭವ ಕಾರ್ಯಕ್ರಮ 2024-25 ದ ಅಡಿಯಲ್ಲಿ ಬೀಜ ಉಪಚಾರ ಪದ್ಧತಿಯ ಪ್ರಾತ್ಯಕ್ಷಿಕೆಯನ್ನು ಗ್ರಾಮಸ್ಥರಿಗೆ ನಡೆಸಿಕೊಟ್ಟರು.
ಅನುವಂಶೀಯತೆ ಮತ್ತು ತಳಿ ಅಭಿವೃದ್ಧಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಪ್ರಿಯದರ್ಶಿನಿ ಮಾತನಾಡಿ, “ರೈತರು ಸಾಧ್ಯವಾದಷ್ಟೂ ಹಲವಾರು ತಳಿಗಳನ್ನು ಏಕೆ ರಕ್ಷಿಸಬೇಕು ಎಂಬುದನ್ನು ವಿವರಿಸಿ, ಅದರ ಲಾಭಗಳ ಬಗ್ಗೆ ಅರಿವು ಮೂಡಿಸಿದರು.
ಬೀಜ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಶೋಭಾ ಕೆ.ವಿ ಮಾತನಾಡಿ, ಬೀಜ ಉಪಚಾರದ ಮಹತ್ವಗಳು ಬಗ್ಗೆ ವಿವರವಾಗಿ ತಿಳಿಸಿದರು.
ಸಹಾಯಕ ಪ್ರಧ್ಯಾಪಕಿ ರಂಜಿತ ಮಾತನಾಡಿ, ಔಷಧೀಯ ಸಸ್ಯಗಳು ಮತ್ತು ಅದರ ಉಪಯುಕ್ತತೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ರೈತರು, ಗ್ರಾಮಸ್ಥರು, ರೈತ ಮಹಿಳೆಯರು, ವಿದ್ಯಾರ್ಥಿಗಳದ ದೇವರಾಜ್, ಚಿನ್ಮಯಿ, ಡಿ. ಕೆ. ಸುಮಾ, ಗೀತಾ, ಹರ್ಷಿತ, ಜ್ಯೋತಿ, ಗೌತಮಿ, ಈಶ್ವರ್ ನಾಗರಾಜ್ ಶೆಟ್ಟಿ, ಭರತ್, ಪರಶುರಾಮ್, ಅರ್ಬಾಜ್, ಚೇತನ್, ಬೀರಲಿಂಗೇಗೌಡ, ಬೀರಲಿಂಗೇಶ್ ಹಾಜರಿದ್ದರು.