Sidlaghatta : ಶಿಡ್ಲಘಟ್ಟ ನಗರದ ಬೋವಿ ಕಾಲೋನಿಯಲ್ಲಿ ಶನಿವಾರ ಅಂಗನವಾಡಿ ಕೇಂದ್ರವನ್ನು (Anganwadi Centre) ಉದ್ಘಾಟಿಸಿ ಎ.ಎಸ್.ಪಿ ಕುಶಾಲ್ ಚೌಕ್ಸೆ ಅವರು ಮಾತನಾಡಿದರು.
ದೇಶದ ಆಸ್ತಿಗಳಾದ ಮುದ್ದುಮಕ್ಕಳಲ್ಲಿ ಉತ್ತಮ ಸಂಸ್ಕಾರ ನೀಡಿ ಅವರನ್ನು ದೇಶಪ್ರೇಮಿಗಳನ್ನಾಗಿ ರೂಪಿಸುವ ಮಹತ್ತರ ಕಾರ್ಯವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕಾಗಿದೆ. ವಿದ್ಯೆ ಎನ್ನುವುದು ಕೇವಲ ಪುಸ್ತಕದ ವಿಚಾರವನ್ನು ಮಕ್ಕಳಿಗೆ ಭೋದನೆ ಮಾಡುವುದಲ್ಲ. ಅವರಿಗೆ ಪಠ್ಯದೊಂದಿಗೆ ಜೀವನ ಪಾಠವನ್ನು ಕಲಿಸಬೇಕು ಹಾಗಾದಾಗ ಮಾತ್ರ ನಮ್ಮ ಹಿರಿಯ ಉದ್ದೇಶ ಈಡೇರುತ್ತದೆ ಎಂದು ತಿಳಿಸಿದರು.
ನಾವು ರಾಸಾಯನಿಕ ಆಹಾರ ಪದಾರ್ಥಗಳ ಬದಲು ಸಾವಯವಕ್ಕೆ ಹೆಚ್ಚಿನ ಒತ್ತು ನೀಡಿ ಮುಂದಿನ ಪೀಳಿಗೆಯನ್ನು ರೋಗಮುಕ್ತರನ್ನಾಗಿ ಮಾಡಬೇಕು ಎಂದರು.
ಶಿಡ್ಲಘಟ್ಟ ಲಿಯೋಕ್ಲಬ್ ಆಫ್ ಕಿರಣ (Leo club of Kirana) ಅಧ್ಯಕ್ಷ ಶ್ರೀಕಾಂತ್, ನಗರಸಭೆಯ ಪೌರಾಯುಕ್ತ ಶ್ರೀಕಾಂತ್ ಹಾಜರಿದ್ದರು.