Melur, Sidlaghatta : ಮಕ್ಕಳಲ್ಲಿ ನಾನು ಅಬ್ದುಲ್ ಕಲಾಂ ರವರನ್ನ, ಒಳ್ಳೆಯ ರಾಜಕಾರಣಿಯನ್ನ, ಒಳ್ಳೆಯ ಎಂಜಿನಿಯರ್ ಮತ್ತು ಒಳ್ಳೆಯ ಡಾಕ್ಟರ್ ಗಳನ್ನ ಕಾಣಬೇಕಾಗಿದೆ ಎಂದು ಸೆಂಟ್ ಥಾಮಸ್ ಶಾಲೆಯ ಅಧ್ಯಕ್ಷ ಎಂ.ಸಿ. ಥಾಮಸ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಸೆಂಟ್ ಥಾಮಸ್ ಶಾಲೆಯಲ್ಲಿ ಬುಧವಾರ ವಿಜ್ಞಾನ ಮತ್ತು ಕಲೆ ವಸ್ತು ಪ್ರದರ್ಶನ – 2023 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಸೃಜನಶೀಲ ಕ್ರಿಯಾತ್ಮಕ ಮನೋಭಾವನೆಯನ್ನು ಉತ್ತೇಜಿಸಲು ವಸ್ತು ಪ್ರದರ್ಶನ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಮಕ್ಕಳು ಯಾವಾಗಲೂ ಕನಸನ್ನು ಕಾಣಬೇಕು ಆ ಕನಸುಗಳನ್ನು ಸಾಕಾರಗೊಳಿಸಲು ಕಷ್ಟ ಪಟ್ಟು ಓದಿ ಒಳ್ಳೆಯ ವಿದ್ಯಾಭ್ಯಾಸವನ್ನು ಮಾಡಬೇಕು. ಮಕ್ಕಳು ವಿಜ್ಞಾನ ಮತ್ತು ಕಲಾ ಪ್ರದರ್ಶನವನ್ನು ಮಕ್ಕಳು ಮಾಡಿರುವುದು ಅವರ ಕ್ರಿಯಾಶಿಲತೆಯನ್ನು ತೋರಿಸುತ್ತಿದೆ ಎಂದರು.
ಬಿಇಓ ನರೇಂದ್ರ ಕುಮಾರ್ ಮಾತನಾಡಿ, ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸುವುದರಿಂದ ಮಗುವಿನ ಸರ್ವಾಂಗೀಣ ಪ್ರಗತಿಯ ಜೊತೆಗೆ ಹೊಸ ಹೊಸ ವಿಷಯಗಳನ್ನು ಕಲಿಯುವುದರಲ್ಲಿ ಆಸಕ್ತಿ ಮೂಡುತ್ತದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಶಿಕ್ಷಕರು ಕಾರ್ಯಯೋನ್ಮುಖರಾಗಿ ಕೆಲಸ ಮಾಡಬೇಕೆಂದರು.
ಪ್ರಗತಿಪರ ರೈತ ಮೇಲೂರು ಬಿ.ಎನ್.ಸಚಿನ್ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರೇರೇಪಿಸಲು, ವಿದ್ಯಾರ್ಥಿಗಳು ನೂತನ ಆವಿಷ್ಕಾರಗಳನ್ನು ತಿಳಿಯಲು ಹಾಗು ಅವರ ಸೃಜನಶೀಲ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹೊರಗೆ ತರುವ ಕೆಲಸ ಶಿಕ್ಷಕರು ಹಾಗು ಪೋಷಕರು ಮಾಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಕಲಾ ವಿಭಾಗದ ವಸ್ತು ಪ್ರದರ್ಶನದಲ್ಲಿ ಆಗಮಿಸಿರುವ ಅತಿಥಿಗಳಿಗೆ ವಿವರಿಸಿದರು.
ಸೆಂಟ್ ಥಾಮಸ್ ಶಾಲೆಯ ಅಕ್ಕ ಪಕ್ಕದ ಶಾಲೆಯ ಮಕ್ಕಳು ವಿಜ್ಞಾನ ಹಾಗು ಕಲಾ ವಿಭಾಗದ ವಸ್ತು ಪ್ರದರ್ಶನ ವಿಕ್ಷಿಸಿ ಮಾಹಿತಿ ಪಡೆದರು.
ಅತ್ಯಂತ ಉತ್ತಮವಾದ ವಸ್ತು ಪ್ರದರ್ಶನ ಹಾಗೂ ಕಲಾಕೃತಿಗಳಿಗೆ ಸೆಂಟ್ ಥಾಮಸ್ ಶಾಲೆಯ ಅದ್ಯಕ್ಷರಾದ ಡಾ.ಥಾಮಸ್ ಬಹುಮಾನವನ್ನು ನೀಡಿದರು.
ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ.ಉಮೇಶ್, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ವಿಸ್ಡಂ ನಾಗರಾಜ್, ಆಕ್ಸ್ಫರ್ಡ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಅಜಯ್ ಥಾಮಸ್, ಅಂಜು ಥಾಮಸ್, ಇಸಿಓ ಭಾಸ್ಕರ್ ಗೌಡ, ಸೆಂಟ್ ಥಾಮಸ್ ಶಾಲೆಯ ಅಧಿಕಾರಿ ಜೋಸೆಫ್, ಮುಖ್ಯ ಶಿಕ್ಷಕ ಆನಂದ್ ಸೇರಿದಂತೆ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.