ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಭಟ್ರೇನಹಳ್ಳಿಯ ಶ್ರೀ ಸಾಯಿನಾಥ ಜ್ಞಾನ ಮಂದಿರದಲ್ಲಿ ಶುಕ್ರವಾರ ವಿಜಯದಶಮಿಯಂದು ಮುತ್ತಿನ ಅಭಿಷೇಕ ನಡೆಸಲಾಯಿತು. ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿದರು.
ವಿಜಯದಶಮಿಯಂದು ಬೆಳಗ್ಗೆಯಿಂದಲೇ ಬಾಬಾರವರಿಗೆ ಅಭಿಷೇಕ, ಅಲಂಕಾರ, ಪೂಜೆ ಮತ್ತು ಚಾಮುಂಡೇಶ್ವರಿ ತಾಯಿಯ ಹೋಮಗಳು ನಡೆಸಲಾಯಿತು.
ಮಧ್ಯಾಹ್ನ ಎರಡು ಗಂಟೆಗೆ ಸಾಯಿ ಬಾಬಾ ರವರ ದರ್ಶನಕ್ಕೆ ಬಂದವರಿಗೆ ಅದರಲ್ಲೂ ವಿಶೇಷವಾಗಿ ಬಿಳಿ ಬಟ್ಟೆ ಧರಿಸಿ ಬಂದ ಪ್ರತಿಯೊಬ್ಬ ಭಕ್ತರಿಗೂ ಬಾಬಾರವರಿಗೆ ಮುತ್ತಿನ ಅಭಿಷೇಕ ಮತ್ತು 108 ಲೀಟರ್ ಹಾಲಿನ ಅಭಿಷೇಕ ಪುಷ್ಪಾಭಿಷೇಕ ಮಾಡಿಸಲು ಅನುವು ಮಾಡಿಕೊಡಲಾಯಿತು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi